ಲೋಡ್ ಶೆಡ್ಡಿಂಗ್ ವಿರುದ್ಧ ಬೀದಿಗಿಳಿದ ಅನ್ನದಾತರು - Mahanayaka

ಲೋಡ್ ಶೆಡ್ಡಿಂಗ್ ವಿರುದ್ಧ ಬೀದಿಗಿಳಿದ ಅನ್ನದಾತರು

farmer
16/08/2023


Provided by

ಲೋಡ್ ಶೆಡ್ಡಿಂಗ್ ವಿರುದ್ಧ ಅನ್ನದಾತರು ಬೀದಿಗಿಳಿದಿದ್ದು, ಲೋಡ್ ಶೆಡ್ಡಿಂಗ್ ವಿರೋಧಿಸಿ ರೈತ ಸಂಘಟನೆಗಳು ಚಿಕ್ಕಮಗಳೂರು ನಗರದ ತಾಲೂಕು ಕಛೇರಿಯಿಂದ ಮೆಸ್ಕಾಂ ಕಛೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ್ರು.

ನಿತ್ಯ ಪವರ್ ಕಟ್ ನಿಂದ ರೈತರು, ಜನಸಾಮಾನ್ಯರಿಗೆ ತೊಂದರೆಯಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರಲ್ಲದೇ, ಸರ್ಕಾರ ಕೂಡಲೇ ಪವರ್ ಕಟ್ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದ್ರು.

ಪವರ್ ಕಟ್ ನಿಂದ ನಾನಾ ಸಮಸ್ಯೆಗಳು ಎದುರಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಚಿಕ್ಕಮಗಳೂರು ನಗರದ ಮೆಸ್ಕಾಂ ಕಛೇರಿ ಮುಂಭಾಗದಲ್ಲಿ ಧರಣಿ ನಡೆಸಿದ್ರು.

 

ಇತ್ತೀಚಿನ ಸುದ್ದಿ