ಯೂಟ್ಯೂಬ್ ಸಂದರ್ಶನದ ಬೆನ್ನಲ್ಲೇ ದರ್ಶನ್ ಫಾರ್ಮ್ ಹೌಸ್ ಗೆ ಅರಣ್ಯ ಇಲಾಖೆ ದಾಳಿ!

ಕಾಡು ಪ್ರಾಣಿಗಳು, ಪಕ್ಷಿಗಳೆಂದರೆ ನಟ ದರ್ಶನ್ ಅವರಿಗೆ ಪಂಚ ಪ್ರಾಣ, ಸಾಕಷ್ಟು ಕಾಡು ಪ್ರಾಣಿಗಳನ್ನು ಅವರು ದತ್ತಪಡೆದುಕೊಳ್ಳುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಈ ನಡುವೆ ಅವರ ಫಾರ್ಮ್ ಹೌಸ್ ನಲ್ಲಿ ವನ್ಯಜೀವಿ ಕಾಯ್ದೆಯಡಿ ಅನುಮತಿ ಹಾಗೂ ಮಾಲೀಕತ್ವದ ಪತ್ರವನ್ನು ತೋರಿಸದೇ ಸಾಕುತ್ತಿದ್ದ ಕೆಲವು ಪಕ್ಷಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಜನವರಿ 20ರಂದು ರಾತ್ರಿ ಅರಣ್ಯ ಇಲಾಖೆ ಅಧಿಕಾರಿಗಳು ಮೈಸೂರಿನ ಟಿ. ನರಸಿಪುರದ ಸಮೀಪದಲ್ಲಿರುವ ನಟ ದರ್ಶನ್ ಅವರ ಫಾರ್ಮ್ ಹೌಸ್ ಗೆ ದಾಳಿ ನಡೆಸಿ, ಕೋಳಿ ಜಾತಿಗೆ ಸೇರಿದ ಮೆಕಾಸೆ,ಗಿಳಿ ಪ್ರಭೇದ ಸನ್‌ಕಾಯ್ನ್,ಪುಕಾಟೋ, ಕಪ್ಪು ಹಂಸ ಸೇರಿದಂತೆ ಹಲವು ಪಕ್ಷಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಪಕ್ಷಿಗಳನ್ನು ಸಾಕಲು ಅವಕಾಶವಿದೆ. ಆದರೆ, ಅದಕ್ಕೆ ಮಾಲೀಕತ್ವ ಪತ್ರದ ಸೇರಿದಂತೆ ಹಲವು ದಾಖಲಾತಿಗಳು ಬೇಕಿವೆ. ಆದರೆ ಈ ಪಕ್ಷಗಳನ್ನು ಪರವಾನಿಗೆ ಇಲ್ಲದೇ ಸಾಕುತ್ತಿದ್ದುದರಿಂದ ಅಧಿಕಾರಿಗಳು ಪಕ್ಷಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.
ಇತ್ತೀಚೆಗಷ್ಟೇ ತಾವು ಸಾಕುತ್ತಿರುವ ಪಕ್ಷಿಗಳ ಕುರಿತು ನಟ ದರ್ಶನ್ ಅವರು ಯೂಟ್ಯೂಬ್ ವೊಂದಕ್ಕೆ ಸಂದರ್ಶನ ನೀಡಿದ್ದರು. ಈ ವಿಡಿಯೋದಲ್ಲಿ ಹಕ್ಕಿಗಳ ವಿಶಿಷ್ಟ ಪ್ರಭೇದದ ಬಗ್ಗೆ ಪರಿಚಯ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ದಾಳಿ ಮಾಡಿದ್ದಾರೆ. ಆದ್ರೆ, ಈ ಬಗ್ಗೆ ನಟ ದರ್ಶನ್ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw