ಬೆಳ್ತಂಗಡಿಯಲ್ಲಿ ಹೆಚ್ಚಿದ ಕಾಡಾನೆ ಭೀತಿ: ರಬ್ಬರ್ ತೋಟದಲ್ಲಿ ಕಾಣಿಸಿಕೊಂಡ ಆನೆ - Mahanayaka

ಬೆಳ್ತಂಗಡಿಯಲ್ಲಿ ಹೆಚ್ಚಿದ ಕಾಡಾನೆ ಭೀತಿ: ರಬ್ಬರ್ ತೋಟದಲ್ಲಿ ಕಾಣಿಸಿಕೊಂಡ ಆನೆ

belthangady
14/12/2022


Provided by

ಬೆಳ್ತಂಗಡಿ: ತಾಲೂಕಿನಲ್ಲಿ ನಿರಂತರವಾಗಿ ಕಾಡಾನೆಗಳ ಕಿರುಕುಳ ಹೆಚ್ಚಾಗುತ್ತಿದೆ ಕಾಡಾನೆಗಳು ಹಗಲು ಹೊತ್ತಿನಲ್ಲಿಯೇ ರಬ್ಬರ್ ತೋಟಗಳಲ್ಲಿ ತಿರುಗಾಟ ನಡೆಸುತ್ತಿದ್ದು ಜನರು ಭಯಪಡುವಂತಹ ವಾತಾವರಣ ನಿರ್ಮಾಣವಾಗಿದೆ.

ಎರಡು ದಿನಗಳ ಹಿಂದೆ ಅಣಿಯೂರಿನಲ್ಲಿ ಪೇಟೆಯಲ್ಲಿಯೇ ಬೆಳಿಗ್ಗೆ ಒಂಟಿ ಸಲಗ ಕಾಣಿಸಿಕೊಂಡು ಜನರಲ್ಲಿ ಭಯ ಮೂಡಿಸಿತ್ತು. ಇದೀಗ ಶಿಶಿಲದಲ್ಲಿ ಒಂಟಿ ಸಲಗವೊಂದು ಮಂಗಳವಾರ ಸಂಜೆಯ ವೇಳೆ ಜನವಸತಿ ಪ್ರದೇಶದ ನಡುವೆಯೇ ತಿರುಗಾಟ ನಡೆಸಿದ್ದು ಇಲ್ಲಿನ ಜನರಲ್ಲಿ ಭಯ ಮೂಡಿಸಿದೆ.

ಶಿಶಿಲದ ಉಣ್ತಿಮಾರು ಎಂಬಲ್ಲಿನ ಲಕ್ಷ್ಮಣ್ ಎಂಬವರ ತೋಟದಲ್ಲಿ ಕಾಡಾನೆ ಕಾಣಿಸಿಕೊಂಡಿದೆ.  ಕಾಡಾನೆಗಳ ಎರಡು ಮೂರು ಗುಂಪು ತಾಲೂಕಿನ ವಿವಿಧ ಭಾಗಗಳಲ್ಲಿ ತಿರುಗಾಟ ನಡೆಸುತ್ತಿರುವುದು ಕಂಡು ಬಂದಿದೆ ಒಂದೆಡೆಯಿಂದ ಕಾಡಾನೆ ಓಡಿಸುವ ಪ್ರಯತ್ನಗಳು ನಡೆಯುತ್ತಿರುವಾಗಲೇ ಮತ್ತೊಂದೆಡೆ ಕಾಡಾನೆಗಳ ಉಪಟಳ ಹೆಚ್ಚಾಗುತ್ತಿದೆ. ಕಾಡಾನೆಗಳನ್ನು ಓಡಿಸಲು ಲ್ರಮ ಕೈಗೊಳ್ಳುವಂತೆ ಜನರು ಒತ್ತಾಯಿಸುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ