ಕಾಫಿ ಗಿಡಗಳನ್ನು ಕತ್ತರಿಸಿ ಹಾಕಿ ಒತ್ತುವರಿ ತೆರವು ಮಾಡಿದ ಅರಣ್ಯಾಧಿಕಾರಿಗಳು - Mahanayaka

ಕಾಫಿ ಗಿಡಗಳನ್ನು ಕತ್ತರಿಸಿ ಹಾಕಿ ಒತ್ತುವರಿ ತೆರವು ಮಾಡಿದ ಅರಣ್ಯಾಧಿಕಾರಿಗಳು

forest department
03/06/2025


Provided by

ಚಿಕ್ಕಮಗಳೂರು:   ಫಸಲಿನ ಕಾಫಿ ಗಿಡಗಳನ್ನ ಅರಣ್ಯ ಇಲಾಖೆ ಕಡಿದು ಹಾಕಿದ ಘಟನೆ ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿದೆ.

ಅರಣ್ಯ ಇಲಾಖೆಯಿಂದ ಒತ್ತುವರಿ ತೆರೆವು ಕಾರ್ಯಾಚರಣೆ ನಡೆಯುತ್ತಿದ್ದು,  ಭದ್ರಾ ಹುಲಿ ಮೀಸಲು ವ್ಯಾಪ್ತಿಯಲ್ಲಿ ಮಾಡಿದ್ದ ಒತ್ತುವರಿ ಕಾರ್ಯಾಚರಣೆ ನಡೆಸಲಾಗಿದೆ.

ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ 43 ಎಕರೆ ಅರಣ್ಯ ಭೂಮಿ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಒತ್ತುವರಿ ಮಾಡಿಕೊಂಡು ಬೆಳೆಗಾರ ಬೆಳೆದಿದ್ದ ಕಾಫಿ ಗಿಡಗಳನ್ನು ಕತ್ತರಿಸಿ ಹಾಕಲಾಗಿದೆ.

ಚಿಕ್ಕಮಗಳೂರು ನಗರದ ನರೇಂದ್ರ ಪೈ ಎಂಬ ವ್ಯಕ್ತಿ  ಚಿಕ್ಕಮಗಳೂರು ತಾಲೂಕಿನ ಕೆಸವಿನಮನೆ ಗ್ರಾಮದಲ್ಲಿ 43 ಎಕರೆ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡಿದ್ದ. ನ್ಯಾಯಾಲಯದ ಆದೇಶದಂತೆ ಅರಣ್ಯ ಇಲಾಖೆ ಒತ್ತುವರಿ ವಿರುದ್ಧ ಕಾರ್ಯಾಚರಣೆ ನಡೆಸಿದ್ದು, ಸಚಿವರ ಆದೇಶ, ಕೋರ್ಟ್ ಆದೇಶದ ಅನ್ವಯ ಒತ್ತುವರಿ ತೆರವು ಮಾಡಲಾಗಿದೆ.

43 ಎಕರೆ ಪ್ರದೇಶದಲ್ಲಿ ಕಾಫಿ-ಮೆಣಸು-ಸಿಲ್ವರ್ ಮರಗಳನ್ನು ಬೆಳೆಯಲಾಗಿತ್ತು. ಅರಣ್ಯ ಸಂರಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಒತ್ತುವರಿ  ತೆರವು ಕಾರ್ಯಾಚರಣೆ ನಡೆಸಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ