ಬೆಂಕಿ ಅನಾಹುತ: ಮನೆಯೊಳಗೆ ಉಸಿರುಗಟ್ಟಿ ಮಗು ಸಹಿತ ಒಂದೇ ಕುಟುಂಬದ ನಾಲ್ವರು ಸಾವು - Mahanayaka

ಬೆಂಕಿ ಅನಾಹುತ: ಮನೆಯೊಳಗೆ ಉಸಿರುಗಟ್ಟಿ ಮಗು ಸಹಿತ ಒಂದೇ ಕುಟುಂಬದ ನಾಲ್ವರು ಸಾವು

gandhinagar gujarath
31/03/2024


Provided by

ಗಾಂಧಿನಗರ: ಬೆಂಕಿ ಆಕಸ್ಮಿಕದ ಪರಿಣಾಮ  ಮಗು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಮನೆಯೊಳಗೆ ಸಿಲುಕಿ ಉಸಿರುಗಟ್ಟಿ ಸಾವನ್ನಪ್ಪಿದ ದಾರುಣ ಘಟನೆ ಗುಜರಾತ್ ನ ದ್ವಾರಕಾ ಜಿಲ್ಲೆಯ ಆದಿತ್ಯ ರಸ್ತೆಯಲ್ಲಿ ನಡೆದಿದೆ.

ದ್ವಾರಕಾ ನಗರದ ಆದಿತ್ಯ ರಸ್ತೆ ನಿವಾಸಿಗಳಾದ ಪವನ್ ಉಪಧ್ಯಾಯ(39) ಹಾಗೂ ಅವರ ಪತ್ನಿ ತಿಥಿ(29), ಮಗಳು ಧ್ಯಾನ ಹಾಗೂ ತಾಯಿ ಭವಾನಿಬೆನ್(69) ಮೃತಪಟ್ಟವರಾಗಿದ್ದಾರೆ.

ಅತೀಯಾದ ಬಿಸಿಯಿಂದಾಗಿ ಏರ್ ಕಂಡಿಷನ್ ಸ್ಫೋಟಗೊಂಡ ಪರಿಣಾಮ ಈ ಘಟನೆ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಮನೆಯೊಳಗೆ ಪ್ರಜ್ಞಾಹೀನವಾಗಿ ಬಿದ್ದಿದ್ದ ಕುಟುಂಬಸ್ಥರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅವರು ಅದಾಗಲೇ ಮೃತಪಟ್ಟಿದ್ದರು.

ಬೆಂಕಿ ಅನಾಹುತದ ವೇಳೆ ಮನೆಯಲ್ಲಿ ಕರೆಂಟ್ ಹೋಗಿದ್ದು, ಪರಿಣಾಮವಾಗಿ ಮನೆಯವರಿಗೆ ಹೊರ ಬರಲು ದಾರಿ ಕಾಣದೇ ಈ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ. ಅದೇ ಮನೆಯ ನೆಲ ಅಂತಸ್ತಿನಲ್ಲಿ ಮಲಗಿದ್ದ ಅಜ್ಜಿ ಅಪಾಯದಿಂದ ಪಾರಾಗಿದ್ದಾರೆ. ಘಟನೆ ಸಂಬಂಧ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ