ಟಿಪ್ಪು ವಂಶಸ್ಥೆ ನೂರ್ ಇನಾಯತ್ ಖಾನ್ ಅವರಿಗೆ ಫ್ರಾನ್ಸ್ ಸರ್ಕಾರ ಗೌರವ: ಅಂಚೆ ಚೀಟಿ ಬಿಡುಗಡೆ
24/11/2025
ಲಂಡನ್: ಟಿಪ್ಪು ಸುಲ್ತಾನ್ ವಂಶಸ್ಥೆ ನೂರ್ ಇನಾಯತ್ ಖಾನ್ ಅವರ ಅಂಚೆ ಚೀಟಿಯನ್ನು ಫ್ರಾನ್ಸ್ ಸರ್ಕಾರ ಬಿಡುಗಡೆ ಮಾಡಿದ್ದು, ಈ ಮೂಲಕ ಟಿಪ್ಪು ಸುಲ್ತಾನ್ ವಂಶಸ್ಥರಿಗೆ ಗೌರವ ಸಲ್ಲಿಸಿದೆ.
ಫ್ರೆಂಚ್ ಅಂಚೆ ಸೇವೆ, ಲಾ ಪೋಸ್ಟೆಯು ನಾಜಿಗಳ ವಿರುದ್ಧ ಹೋರಾಡಿದವರ ಗೌರವಾರ್ಥ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದೆ. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಬ್ರಿಟನ್ ನ ವಿಶೇಷ ಕಾರ್ಯಾಚರಣೆ ವಿಭಾಗಕ್ಕೆ ರಹಸ್ಯ ಪ್ರತಿನಿಧಿಯಾಗಿ ಫ್ರಾನ್ಸ್ ಪರ ನೂರ್ ಕೆಲಸ ಮಾಡಿದ್ದರು.
ಎರಡನೇ ಮಹಾಯುದ್ಧದ 80 ವರ್ಷಾಚರಣೆ ಸಂದರ್ಭದಲ್ಲಿ ಈ ತಿಂಗಳು ಬಿಡುಗಡೆ ಮಾಡಿದ ಅಂಚೆ ಚೀಟಿಗಳಿಗೆ ಅಯ್ಕೆಯಾದ 12 ಯುದ್ಧ ವೀರರು ಮತ್ತು ನಾಯಕಿಯರಲ್ಲಿ ನೂರ್ ಸಹ ಒಬ್ಬರಾಗಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD



























