ಬೆಂಗಳೂರು ಅಭಿವೃದ್ಧಿಗೆ ಎಲ್ಲರ ಸಂಪೂರ್ಣ ಸಹಕಾರ, ಸಲಹೆ ಅಗತ್ಯ: ಡಿ.ಕೆ.ಶಿವಕುಮಾರ್ - Mahanayaka

ಬೆಂಗಳೂರು ಅಭಿವೃದ್ಧಿಗೆ ಎಲ್ಲರ ಸಂಪೂರ್ಣ ಸಹಕಾರ, ಸಲಹೆ ಅಗತ್ಯ: ಡಿ.ಕೆ.ಶಿವಕುಮಾರ್

d k shivakumar
05/06/2023


Provided by

ಬೆಂಗಳೂರು ಅಭಿವೃದ್ಧಿಗೆ ಎಲ್ಲರ ಸಂಪೂರ್ಣ ಸಹಕಾರ, ಸಲಹೆ ಅಗತ್ಯ ಎಂದು ಡಿಸಿಎಂ ಹೇಳಿದ್ದಾರೆ.
ನಗರದಲ್ಲಿ ನಡೆದಬೆಂಗಳೂರು ಸಮಗ್ರ ಅಭಿವೃದ್ಧಿ ಕುರಿತ ಬೆಂಗಳೂರಿನ ಎಲ್ಲ ಶಾಸಕರು, ಸಂಸದರು, ಎಂಎಲ್ಸಿಗಳ ಸಭೆಯಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಅವರ ಪ್ರಾಸ್ತಾವಿಕ ಮಾತನಾಡಿ,
ಚುನಾವಣೆ ರಾಜಕೀಯ ಮುಗೀತು. ಈಗ ರಾಜಕೀಯ ಗೊಡವೆ ಬೇಡ. ರಾಜಕೀಯವಾಗಿ ಸೈದ್ಧಾಂತಿಕ ಭಿನ್ನಾಭಿಪ್ರಾಯ, ವ್ಯತ್ಯಾಸ ಏನೇ ಇರಬಹುದು. ಅದನ್ನು ಪಕ್ಕಕ್ಕಿಡೋಣ. ಬೆಂಗಳೂರು ಅಭಿವೃದ್ಧಿಗೆ ಸಲಹೆ ಕೊಡಿ ಎಂದರು.

ಮಾಜಿ ಪ್ರಧಾನಿ ವಾಜಪೇಯಿ ಅವರು ಬಹಳ ಹಿಂದೆಯೇ ವಿಶ್ವಮಟ್ಟದಲ್ಲಿ ಬೆಂಗಳೂರು ನಗರದ ಘನತೆ, ಪ್ರಾಮುಖ್ಯತೆ ಬಗ್ಗೆ ಒತ್ತಿ ಹೇಳಿದ್ದರು. ಈಗಿನ ಪ್ರಧಾನಿಯವರೂ ಅದನ್ನು ಬಹಳ ಸಾರಿ ಹೇಳಿದ್ದಾರೆ. ಹೀಗಾಗಿ ನಾವು-ನೀವೆಲ್ಲಾ ಸೇರಿ ಬೆಂಗಳೂರಿನ ಘನತೆ, ಗೌರವ, ಹೆಚ್ಚಿಸೋಣ.ನೀವು ಯಾವುದೇ ರಾಜಕೀಯ ಪಕ್ಷದವರು ಆಗಿರಬಹುದು. ಒಟ್ಟಿಗೆ ಕೆಲಸ ಮಾಡೋಣ. ರಾಜಕೀಯ ಬಿಟ್ಟು ಅಭಿವೃದ್ಧಿ ಮಾಡೋಣ. ರಾಜಕೀಯನೇ ಮಾಡ್ತೀನಿ ಅಂದ್ರೆ ನಾನು ಅದಕ್ಕೂ ರೆಡಿ. ಪ್ರೀತಿಗೂ ಸರಿ, ಸಂಘರ್ಷಕ್ಕೂ ರೆಡಿ. ಆದರೆ ನನಗೆ ದ್ವೇಷದ ರಾಜಕೀಯ ಬೇಕಿಲ್ಲ. ಅದರಲ್ಲಿ ನಂಬಿಕೆ ಇಲ್ಲ.

ಬೆಂಗಳೂರು ನಾಗರಿಕರು ಮೂಲಸೌಕರ್ಯ ಸಮಸ್ಯೆಯಿಂದ ಬಹಳ ತೊಂದರೆ ಅನುಭವಿಸಿದ್ದಾರೆ. ಭ್ರಷ್ಟಾಚಾರದಿಂದ ನಲುಗಿ ಹೋಗಿದ್ದಾರೆ. ಸಮರ್ಪಕ ನಾಗರಿಕ ಸೌಕರ್ಯ ಪೂರೈಕೆ ನಮ್ಮೆಲ್ಲರ ಕರ್ತವ್ಯ.ನೀವು ನನಗೆ ಸಲಹೆ ಕೊಡಿ. ನಿರ್ಮಲ ಮನಸ್ಸಿಂದ ತೆಗೆದುಕೊಳ್ಳುತ್ತೇನೆ. ಅನುಷ್ಠಾನಕ್ಕೆ ತರೋಣ. ಬೆಂಗಳೂರು ಗೌರವ ಹೆಚ್ಚಿಸೋಣ.ದೇಶದ ಅರ್ಥ ವ್ಯವಸ್ಥೆಗೆ ಕರ್ನಾಟಕ ಅದರಲ್ಲೂ ವಿಶೇಷವಾಗಿ ಬೆಂಗಳೂರು ಕೊಡುಗೆ ಅಪಾರ. ಜಿಎಸ್ಟಿ, ಸೆಸ್, ನಾನಾ ತೆರಿಗೆ ರೂಪದಲ್ಲಿ ಕೇಂದ್ರಕ್ಕೆ ಹೆಚ್ಚು ಹಣ ಹೋಗುತ್ತದೆ. ರಾಜ್ಯಕ್ಕೆ ಬರಬೇಕಾದ ಪಾಲು ತಂದು ಅಭಿವೃದ್ಧಿ ಮಾಡೋಣ ಎಂದರು.

ಬೆಂಗಳೂರು ಅಭಿವೃದ್ಧಿಯಲ್ಲಿ ಅಧಿಕಾರಿಗಳ ಪಾತ್ರ ಬಹಳ ಮುಖ್ಯ. ಆದರೆ ಕೆಲವರು ಈ ಬಗ್ಗೆ ಗಮನ ಹರಿಸದೆ, ಅವರವರ ಕಣ್ಣಿನ ನೇರಕ್ಕೆ, ಅವರವರ ಅನುಕೂಲಕ್ಕೆ ತಕ್ಕಂತೆ ಹೇಳುತ್ತಾರೆ. ಕೆಲವರು ದಿಕ್ಕು ತಪ್ಪಿಸಲು ಯತ್ನಿಸುತ್ತಾರೆ.ನಾವು ಪ್ರತಿಯೊಂದನ್ನೂ ಪರಾಮರ್ಶಿಸಬೇಕು. ಅಭಿವೃದ್ಧಿ ವಿಚಾರದಲ್ಲಿ ಅಧಿಕಾರಿಗಳು ಆಟ ಆಡಲು ನೋಡಿದರೆ, ದಿಕ್ಕು ತಪ್ಪಿಸಲು ಯತ್ನಿಸಿದರೆ ಸಹಿಸುವುದಿಲ್ಲ. ಅಂತಹವರು ಜಾಗ ಖಾಲಿ ಮಾಡಬೇಕಾಗುತ್ತದೆ.

ನಿಮ್ಮ ವೈಯಕ್ತಿಕ ಹಿತ ಪಕ್ಕಕ್ಕಿಡಿ. ನಿಜ ಅರ್ಥದಲ್ಲಿ ಬೆಂಗಳೂರು ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಿ, ಅನುಷ್ಠಾನಕ್ಕೆ ತನ್ನಿ.ಹಿಂದಿನ ದಿನಗಳಲ್ಲಿ ಏನಾಯಿತು ಎಂಬ ಬಗ್ಗೆ ಚರ್ಚೆ, ಪರಾಮರ್ಶೆಯಲ್ಲಿ ಸಮಯ ವ್ಯಯಿಸುವುದು ನನಗೆ ಬೇಕಿಲ್ಲ. ಭವಿಷ್ಯದ ಬಗ್ಗೆ ಸಕರಾತ್ಮಕ ಚಿಂತನೆ ಮಾಡೋಣ. ಬೆಂಗಳೂರು ಪರಿವರ್ತನೆ ಮಾಡೋಣ ಎಂದು ಡಿಕೆಶಿ ಕರೆ ನೀಡಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

 

ಇತ್ತೀಚಿನ ಸುದ್ದಿ