ಗಮನಿಸಿ: ಮಾರ್ಚ್ 27(ನಾಳೆ)ರಿಂದ ಎಪ್ರಿಲ್ 4ರವರೆಗೆ 7ದಿನ ಬ್ಯಾಂಕ್ ಬಂದ್ - Mahanayaka

ಗಮನಿಸಿ: ಮಾರ್ಚ್ 27(ನಾಳೆ)ರಿಂದ ಎಪ್ರಿಲ್ 4ರವರೆಗೆ 7ದಿನ ಬ್ಯಾಂಕ್ ಬಂದ್

bank
26/03/2021


Provided by

ನವದೆಹಲಿ:  ನಾಳೆ(ಮಾರ್ಚ್ 27)ರಿಂದ ಎಪ್ರಿಲ್ 4ರವರೆಗೆ 7 ದಿನಗಳ ಕಾಲ ಬ್ಯಾಂಕ್ ಬಂದ್ ಇರಲಿದ್ದು, ಗ್ರಾಹಕರು ತಮ್ಮ ಕೆಲಸ ಕಾರ್ಯಗಳನ್ನು  ಶುಕ್ರವಾರ ಅಂದರೆ ಇಂದೇ ಮುಗಿಸಿಕೊಳ್ಳುವುದು ಉತ್ತಮ.

ಶನಿವಾರದಿಂದ  ಸತತವಾಗಿ ಮೂರು ದಿನಗಳ ಕಾಲ ಬ್ಯಾಂಕ್ ಬಂದ್ ಇರಲಿವೆ.  ಮಾರ್ಚ್ 27ರಿಂದ ಎಪ್ರಿಲ್ 4ರ ನಡುವೆ ಕೇವಲ 2ದಿನ ಮಾತ್ರವೇ ಬ್ಯಾಂಕ್ ತೆರೆದಿರುತ್ತದೆ. ರಜಾ, ಹಬ್ಬಗಳು ಮೊದಲಾದ ಕಾರಣಗಳಿಂದ 7 ದಿನಗಳ ಕಾಲ ಬ್ಯಾಂಕ್ ಗಳು ಬಂದ್ ಆಗಿರಲಿದೆ.

ಮಾ.27 ಕೊನೆಯ ಶನಿವಾರ.

ಮಾರ್ಚ್ 28ರಂದು ರವಿವಾರ.

ಮಾರ್ಚ್ 29ರ ಸೋಮವಾರ ಹೋಳಿರಜೆ.

ಮಾರ್ಚ್ 30ರ ಮಂಗಳವಾರ ಬ್ಯಾಂಕ್ ತೆರೆದಿರುತ್ತದೆ.

ಮಾರ್ಚ್ 31ರಂದು ವರ್ಷಾಂತ್ಯದ ರಜೆ.

ಎಪ್ರಿಲ್ 1ರಂದು ಲೆಕ್ಕಗಳ ಮುಕ್ತಾಯದ ದಿನ.

ಎಪ್ರಿಲ್ 2ರ ಶುಕ್ರವಾರ ಗುಡ್ ಫ್ರೈಡೇ.

ಎಪ್ರಿಲ್ 3ರ ಶನಿವಾರ ಬ್ಯಾಂಕ್ ತೆರೆದಿರುತ್ತದೆ.

ಎಪ್ರಿಲ್ 4ರಂದು ರವಿವಾರದ ರಜೆ.

ಇತ್ತೀಚಿನ ಸುದ್ದಿ