ಕಳಸೇಶ್ವರ ಸ್ವಾಮಿ ಜಾತ್ರೆಯಲ್ಲಿ ಪೊಲೀಸರ ಮುಂದೆಯೇ ಜೂಜಾಟ...! - Mahanayaka
5:18 PM Wednesday 5 - November 2025

ಕಳಸೇಶ್ವರ ಸ್ವಾಮಿ ಜಾತ್ರೆಯಲ್ಲಿ ಪೊಲೀಸರ ಮುಂದೆಯೇ ಜೂಜಾಟ…!

Gambling
21/02/2024

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಕಳಸೇಶ್ವರ ಸ್ವಾಮಿ ಜಾತ್ರೆಯಲ್ಲಿ ಪೊಲೀಸರ ಸಮ್ಮುಖದಲ್ಲೇ ಜೂಜಾಟ, ಬೆಟ್ಟಿಂಗ್ ದಂಧೆ ನಡೆಸಲಾಗಿದೆ ಅನ್ನೋ ಆರೋಪ ಕೇಳಿ ಬಂದಿದೆ.

ಜಾತ್ರೆಯಲ್ಲಿ ಪೊಲೀಸರೇ ಜೂಜು ಆಡಿಸಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ. ಜೂಜು ನಡೆಯುತ್ತಿದ್ದ ಸ್ಥಳದಲ್ಲೇ ಪೊಲೀಸರಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.

ಜೂಜು ಕಾನೂನು ಬಾಹಿರ ಎಂದು ತಿಳಿದಿದ್ದರೂ, ಪೊಲೀಸರು ಜೂಜು ನಡೆಯುತ್ತಿರೋದನ್ನೂ ಕಂಡೂ ಕಾಣದಂತೆ ತೆರಳಿದ್ದಾರೆ. ಕಾನೂನು ಬಾಹಿರ ಜೂಜಿಗೆ ಪೊಲೀಸರೇ ಕಾವಲು ನಿಂತ್ರಾ ಅನ್ನೋ ಪ್ರಶ್ನೆಗಳು ಕೇಳಿ ಬಂದಿವೆ.

ಇತ್ತೀಚಿನ ಸುದ್ದಿ