ತ್ರಿಪುರಾದಲ್ಲಿ ಸಾಮೂಹಿಕ ಅತ್ಯಾಚಾರ: ಬೆಚ್ಚಿಬೀಳಿಸಿದ ಕಿರಾತಕರ ಕೃತ್ಯ - Mahanayaka
4:30 AM Saturday 18 - October 2025

ತ್ರಿಪುರಾದಲ್ಲಿ ಸಾಮೂಹಿಕ ಅತ್ಯಾಚಾರ: ಬೆಚ್ಚಿಬೀಳಿಸಿದ ಕಿರಾತಕರ ಕೃತ್ಯ

05/06/2023

ಅಪ್ರಾಪ್ತ ವಯಸ್ಕಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಆಕೆಯನ್ನು ಕಾರಿನಿಂದ ಹೊರಕ್ಕೆ ಎಸೆದ ಘಟನೆ ದಕ್ಷಿಣ ತ್ರಿಪುರಾದ ಟೆಪಾನಿಯಾ ಇಕೋ ಪಾರ್ಕ್‌ನಲ್ಲಿ ಈ ಘಟನೆ ನಡೆದಿದೆ.


Provided by

ಫೇಸ್‌ಬುಕ್‌ನಲ್ಲಿ ಹುಡುಗಿ ಸ್ನೇಹ ಬೆಳೆಸಿದ್ದ ಪ್ರಮುಖ ಆರೋಪಿ 21 ವರ್ಷದ ಯುವಕನನ್ನು ಪುರ್ಬಾ ಗೋಕುಲ್‌ಪುರದಲ್ಲಿರುವ ಆತನ ಮನೆಯಿಂದ ಬಂಧಿಸಲಾಗಿದೆ. ಅಪರಾಧದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ.

ಮುಖ್ಯ ಆರೋಪಿಯು ಹುಡುಗಿಯನ್ನು ಟೆಪಾನಿಯಾ ಇಕೋ ಪಾರ್ಕ್‌ನಲ್ಲಿ ಭೇಟಿಯಾಗುವಂತೆ ಒತ್ತಾಯಿಸಿದ್ದ. ಅಲ್ಲಿ ಅವನು ಅವಳ ಆಕ್ಷೇಪಣೆಯ ಹೊರತಾಗಿಯೂ ಅವಳ ಕೆಲವು ಫೋಟೋಗಳನ್ನು ಕ್ಲಿಕ್ ಮಾಡಿದ್ದ. ಹುಡುಗಿ ತನಗೆ ಬ್ಲ್ಯಾಕ್‌ಮೇಲ್ ಮಾಡಲಾಗುತ್ತಿದೆ ಎಂದು ಅರಿತುಕೊಂಡಿದ್ದಾಳೆ. ಆಗ ಸ್ಥಳದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಳು. ಆದರೆ ಸಾಧ್ಯವಾಗಲಿಲ್ಲ.

ಪ್ರಮುಖ ಆರೋಪಿ 17 ವರ್ಷದ ಯುವತಿಯನ್ನು ಕಾಡಿನೊಳಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿದುಬಂದಿದೆ. ಆತನೊಂದಿಗೆ ಇತರ ಇಬ್ಬರು ಸಹಚರರು ಸೇರಿಕೊಂಡಿದ್ದಾರೆ. ಆ ಬಳಿಕ ಮೂವರು ವ್ಯಕ್ತಿಗಳು ರಾಜರ್‌ ಬಾಗ್ ಪ್ರದೇಶದಲ್ಲಿ ಸಂತ್ರಸ್ತೆಯನ್ನು ಕಾರಿನಿಂದ ಹೊರಕ್ಕೆ ಎಸೆದು ವಾಹನದಲ್ಲಿ ಪರಾರಿಯಾಗಿದ್ದಾರೆ.

ಸಂತ್ರಸ್ತೆ ಮನೆಗೆ ಹಿಂದಿರುಗಿ ತನ್ನ ಕುಟುಂಬಕ್ಕೆ ತನ್ನ ಕಷ್ಟವನ್ನು ವಿವರಿಸಿದ್ದಾಳೆ. ಆರ್.ಕೆ.ಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ನಿರ್ದಿಷ್ಟ ಎಫ್‌ ಐಆರ್ ದಾಖಲಿಸಲಾಗಿದೆ. ಬಾಲಕಿ ಮತ್ತು ಪ್ರಮುಖ ಆರೋಪಿ ಕಳೆದ ಆರು ತಿಂಗಳಿನಿಂದ ಫೇಸ್‌ಬುಕ್‌ನಲ್ಲಿ ಸ್ನೇಹಿತರಾಗಿದ್ದು, ವ್ಯಕ್ತಿ ತನ್ನ ಗುರುತನ್ನು ಆಕೆಗೆ ಮರೆಮಾಚಿದ್ದಾನೆ. ಪ್ರಕರಣದ ತನಿಖೆ ನಡೆಯುತ್ತಿದೆ. ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ