ಹೊಸ ಋತುವಿನ ಮೀನುಗಾರಿಕೆಗೆ ತೆರಳಲು ಮುನ್ನ ಮೀನುಗಾರರಿಂದ ವಿಶೇಷ ಪೂಜೆ

ಮಲ್ಪೆ: ಹೊಸ ಋತುವಿನ ಮೀನುಗಾರಿಕೆಗೆ ತೆರಳಲು ಮುನ್ನ ಮೀನುಗಾರಿಕೆ ನಡೆಸುವಾಗ ಯಾವುದೇ ತೊಂದರೆಗಳಾಗದಂತೆ ಗಂಗಾಮಾತೆಗೆ ಕ್ಷೀರ, ಫಲಪುಷ್ಟವನ್ನು ಅರ್ಪಿಸಿ ವಿಶೇಷ ಪೂಜೆ ಸಲ್ಲಿಸುವ ಸಮುದ್ರ ಪೂಜೆಯು ಶುಕ್ರವಾರ ಮಲ್ಪೆ ಕಡಲತೀರದಲ್ಲಿ ನಡೆಯಿತು.
ಮಲ್ಪೆ ಮೀನುಗಾರ ಸಂಘದ ನೇತೃತ್ವದಲ್ಲಿ ಬಾಲಕೃಷ್ಣ ತಂತ್ರಿ ಹಾಗೂ ಶ್ರೀನಿವಾಸ್ ಭಟ್ ಪೌರೋಹಿತ್ಯದಲ್ಲಿ ಬೆಳಗ್ಗೆ ವಡಭಾಂಡ ಬಲರಾಮ, ಹಾಗೂ ಬೊಬ್ಬರ್ಯ ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಬಳಿಕ ಮೀನುಗಾರರೆಲ್ಲರು ಶೋಭಾಯಾತ್ರೆಯಲ್ಲಿ ತೆರಳಿ ವಡಭಾಂಡೇಶ್ವರ ಸಮುದ್ರ ತೀರದಲ್ಲಿ ಪೂಜೆಯನ್ನು ನಡೆಸಿದರು. ಬಳಿಕ ಮೀನುಗಾರರು ಕ್ಷೀರಾ ಲಪುಷ್ಪ, ಸೀಯಾಳವನನ್ನು ಸಮುದ್ರ ರಾಜನಿಗೆ ಸಮರ್ಪಿಸಿದರು.
ಉಚ್ಚಿಲ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಮೀನು ಮಾರಾಟ ೆಡರೇಶನಿನ ಅಧ್ಯಕ್ಷ ಯಶ್ಪಾಲ್ ಸುವರ್ಣ, ಕಾಂಚನ್ ಹುಂಡೈ ಮಾಲಕ ಪ್ರಸಾದ್ರಾಜ್ ಕಾಂಚನ್, ಮೀನುಗಾರ ಸಂಘದ ಅಧ್ಯಕ್ಷ ದಯಾನಂದ ಕೆ. ಸುವರ್ಣ, ಉಪಾಧ್ಯಕ್ಷರುಗಳಾದ ನಾಗರಾಜ್ ಬಿ.ಕುಂದರ್, ರೆುೀಶ್ ಕೋಟ್ಯಾನ್, ನಾಗರಾಜ್ ಸುವರ್ಣ, ರವಿ ಸಾಲ್ಯಾನ್, ರಾಘವ ಜಿ. ಕೆ., ರಮೇಶ್ ಎಸ್. ಕುಂದರ್, ಕಾರ್ಯದರ್ಶಿ ರತ್ನಾಕರ್ ಸಾಲ್ಯಾನ್, ಜತೆ ಕಾರ್ಯದರ್ಶಿಗಳಾದ ಕಿಶೋರ್ ಕುಮಾರ್,
ಧನಂಜಯ್ ಕಾಂಚನ್, ಕೋಶಾಧಿಕಾರಿ ಕರುಣಾಕರ್ ಸಾಲ್ಯಾನ್, ಮೀನುಗಾರ ಮುಖಂಡರಾದ ಹರಿಯಪ್ಪ ಕೋಟ್ಯಾನ್,ಸಾಧು ಸಾಲ್ಯಾನ್, ಗುಂಡು ಬಿ. ಅಮೀನ್, ಹಿರಿಯಣ್ಣ ಟಿ. ಕಿದಿಯೂರು, ವಿವಿಧ ಮೀನುಗಾರಿಕಾ ಸಂಘಟನೆಗಳ ರಾಮಚಂದ್ರ ಕುಂದರ್, ಸುಭಾಷ್ ಎಸ್. ಮೆಂಡನ್, ಸತೀಶ್ ಕುಂದರ್, ಕೇಶವ ಕೋಟ್ಯಾನ್, ಗೋಪಾಲ ಅರ್. ಕೆ, ದಯಾಂದ ಕುಂದರ್,ಸೋಮನಾಥ್ ಕಾಂಚನ್,
ಸುಂದರ್ ಪಿ. ಸಾಲ್ಯಾನ್, ನಾರಾಯಣ್ ಜೆ. ಕರ್ಕೆರ, ನವೀನ್ ಕೊಟ್ಯಾನ್, ಮೋಹನ್ ಕುಂದರ್, ಹರಿಶ್ಚಂದ್ರ ಕಾಂಚನ್, ರವಿರಾಜ್ ಸುವರ್ಣ, ವಿನಯ್ ಕರ್ಕೆರ, ದಯಾಕರ್ ಸುವರ್ಣ, ಗೋವರ್ಧನ್ ುತ್ರನ್, ಜಗನ್ನಾಥ ಅಮೀನ್ , ಮಿಥುನ್ ಕುಂದರ್, ಪಾಂಡುರಂಗ ಕೊಟ್ಯಾನ್, ಕೃಷ್ಣ ಜಿ. ಕೊಟ್ಯಾನ್, ಪುರಂದರ ತಿಂಗಳಾಯ,ರತ್ನಾಕರ್ ಕರ್ಕೇರ,ದೇವದಾಸ್ ಕುಂದರ್,ಸುಮಿತ್ರ, ಮತ್ತಿತರ ಮೀನುಗಾರ ಮುಖಂಡರು ಹಾಗೂ ಮಹಿಳಾ ಮೀನುಗಾರ ಸಂಘದ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka