ಗಂಟಲಲ್ಲಿ ಮೊಟ್ಟೆ ಸಿಕ್ಕಿಹಾಕಿಕೊಂಡು ಮಹಿಳೆ ಸಾವು - Mahanayaka
10:50 AM Thursday 16 - October 2025

ಗಂಟಲಲ್ಲಿ ಮೊಟ್ಟೆ ಸಿಕ್ಕಿಹಾಕಿಕೊಂಡು ಮಹಿಳೆ ಸಾವು

boiled egg
15/10/2021

ಹೈದರಾಬಾದ್: ಊಟ ಮಾಡುತ್ತಿದ್ದ ಸಂದರ್ಭದಲ್ಲಿ ಬೇಯಿಸಿದ ಮೊಟ್ಟೆ(Boiled Egg)  ಗಂಟಲಲ್ಲಿ ಸಿಕ್ಕಿ ಹಾಕಿಕೊಂಡು ಮಹಿಳೆಯೊಬ್ಬರು ಉಸಿರುಗಟ್ಟಿ ಸಾವನ್ನಪ್ಪಿದ ದಾರುಣ ಘಟನೆ ತೆಲಂಗಾಣದ ನೇರಳಪಲ್ಲಿ(Neralapalliಯಲ್ಲಿ ನಡೆದಿದೆ.


Provided by

ಲೀಲಮ್ಮ ಎಂಬವರು ಮೃತಪಟ್ಟವರು ಎಂದು ಗುರುತಿಸಸಲಾಗಿದೆ. ಊಟ ಮಾಡುತ್ತಿದ್ದ ಸಂದರ್ಭದಲ್ಲಿ ಮೊಟ್ಟೆಯನ್ನು ಕಚ್ಚದೇ ಹಾಗೆಯೇ ಬಾಯಿಗೆ ಹಾಕಿಕೊಂಡಿದ್ದಾರೆ. ಈ ವೇಳೆ ಮೊಟ್ಟೆ ಆಕಸ್ಮಿಕವಾಗಿ ಗಂಟಲಿಗೆ ಜಾರಿದೆ ಎನ್ನಲಾಗಿದೆ.

ಗಂಟಲಿನಲ್ಲಿ ಮೊಟ್ಟೆ ಸಿಲುಕಿಕೊಂಡಿದ್ದು, ಪರಿಣಾಮವಾಗಿ ಅವರಿಗೆ ಉಸಿರಾಡಲು ಸಾಧ್ಯವಾಗದೇ ಅವರು ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮೊಟ್ಟೆಯನ್ನು ಕತ್ತರಿಸಿ ತಿನ್ನುತ್ತಿದ್ದರೆ, ಈ ಅನಾಹುತ ಸಂಭವಿಸುತ್ತಿರಲಿಲ್ಲ ಎಂದು ಮೃತ ಮಹಿಳೆಯ ಸಂಬಂಧಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ಮಹಾನಾಯಕ(Mahanayaka) ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb

ಇನ್ನಷ್ಟು ಸುದ್ದಿಗಳು…

ವಿದ್ಯಾರ್ಥಿಗೆ ಹಿಗ್ಗಾಮುಗ್ಗ ಥಳಿತ: ಶಿಕ್ಷಕನ ಕೃತ್ಯದ ವಿಡಿಯೋ ವೈರಲ್ ಮಾಡಿದ ವಿದ್ಯಾರ್ಥಿಗಳು

ದೇವಸ್ಥಾನದ ಆವರಣದಲ್ಲಿಯೇ ಮುಖ್ಯ ಅರ್ಚಕನನ್ನು ಗುಂಡು ಹಾರಿಸಿ ಕೊಂದ ಯುವಕರು !

ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ಆರೋಪ: ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಅರೆಸ್ಟ್

ಬಾಂಗ್ಲಾದೇಶದಲ್ಲಿ ದುರ್ಗಾ ಪೂಜೆ ವೇಳೆ ದೇವಸ್ಥಾನದ ಮೇಲೆ ಅಪರಿಚಿತರಿಂದ ದಾಳಿ

ಅಮಾನವೀಯ ಘಟನೆ: ಹೊಲದಲ್ಲಿ ಗನ್ ಪಾಯಿಂಟ್ ನಲ್ಲಿ ಮಹಿಳೆಯ ಮೇಲೆ ಅತ್ಯಾಚಾರ

ಪುತ್ತೂರು: ಬುದ್ದಿಸ್ಟ್ ಸೊಸೈಟಿ ಆಫ್ ಇಂಡಿಯಾದಿಂದ 65ನೇ ಧಮ್ಮ‌ದೀಕ್ಷಾ ಕಾರ್ಯಕ್ರಮ

ದಕ್ಷಿಣ ಕನ್ನಡ: ಭೀಮ್ ಸೇನೆಯಿಂದ ದಮ್ಮ ಚಕ್ರ ಪರಿವರ್ತನಾ ದಿನಾಚರಣೆ

ಶೈಕ್ಷಣಿಕ ಶುಲ್ಕ ಮರುಪಾವತಿಗಾಗಿ ಅರ್ಜಿ ಆಹ್ವಾನ

ಕನ್ನಡದ ಮತ್ತೋರ್ವ ಹಿರಿಯ ನಟ ಪ್ರೊ.ಜಿ.ಕೆ.ಗೋವಿಂದ ರಾವ್ ನಿಧನ

ಇತ್ತೀಚಿನ ಸುದ್ದಿ