ಗರುಡ ಗ್ಯಾಂಗ್ ನ ರೌಡಿ ಇಸಾಕ್ ಕಾಲಿಗೆ ಪೊಲೀಸರಿಂದ ಗುಂಡೇಟು - Mahanayaka

ಗರುಡ ಗ್ಯಾಂಗ್ ನ ರೌಡಿ ಇಸಾಕ್ ಕಾಲಿಗೆ ಪೊಲೀಸರಿಂದ ಗುಂಡೇಟು

isak
13/03/2025

ಉಡುಪಿ: ಗರುಡ ಗ್ಯಾಂಗ್ ನ ರೌಡಿ ಇಸಾಕ್ ಕಾಲಿಗೆ ಪೊಲೀಸರು ಗುಂಡು ಹಾರಿಸಿರುವ ಘಟನೆ ಹಿರಿಯಡ್ಕ ಸಮೀಪದ ಗುಡ್ಡೆ ಅಂಗಡಿ ಬಳಿಯಲ್ಲಿ ನಡೆದಿದೆ.

ಹಾಸನದ ಚನ್ನರಾಯಪಟ್ಟಣದಿಂದ ಆರೋಪಿಗಳನ್ನು ಬಂಧಿಸಿ, ಉಡುಪಿಗೆ ವಿಚಾರಣೆಗಾಗಿ ಕರೆತರುತ್ತಿದ್ದ ವೇಳೆ ಇಸಾಕ್ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಪೊಲೀಸರ ಮೇಲೆ ಹಲ್ಲೆ ನಡೆಸಿದ ವೇಳೆ ಪೊಲೀಸರು ಗುಂಡು ಹಾರಿಸಿದ್ದಾರೆ ಎಂದು ಹೇಳಲಾಗಿದೆ.

ಘಟನೆಯಲ್ಲಿ ಮೂವರು ಪೊಲೀಸರಿಗೆ ಕೂಡ ಗಾಯವಾಗಿದೆ.  ಸದ್ಯ ಪೊಲೀಸರ ವಶದಲ್ಲಿ ನೂವರು ಆರೋಪಿಗಳಿದ್ದು, ಆರೋಪಿಗಳ ವಿಚಾರಣೆ ಮುಂದುವರಿದಿದೆ.

ಉಡುಪಿಗೆ ಬರುತ್ತಿದ್ದ ವೇಳೆ ಮೂತ್ರ ಬರುತ್ತಿದೆ, ವಾಂತಿ ಆಗ್ತಿದೆ ಎಂಬ ನೆಪಗಳನ್ನು ಹೇಳಿ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದರು ಎಂದು ಹೇಳಲಾಗಿದೆ. ಘಟನೆಯಲ್ಲಿ ಗಾಯಗೊಂಡ ಮಣಿಪಾಲ, ಹಿರಿಯಡ್ಕ—ಮಲ್ಪೆಯ ಮೂವರು ಪೊಲೀಸ್ ಸಿಬ್ಬಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ