ಗಾಝಾ ದಾಳಿ: ಆರ್ಥಿಕವಾಗಿ ತತ್ತರಿಸಿದ ಇಸ್ರೇಲ್ ದೇಶ - Mahanayaka
1:23 PM Thursday 11 - September 2025

ಗಾಝಾ ದಾಳಿ: ಆರ್ಥಿಕವಾಗಿ ತತ್ತರಿಸಿದ ಇಸ್ರೇಲ್ ದೇಶ

14/09/2024

ಗಾಝಾದ ಮೇಲಿನ ದಾಳಿಯು ಇಸ್ರೇಲನ್ನು ಆರ್ಥಿಕವಾಗಿ ತಾರು ಮಾರುಗೊಳಿಸಿದೆ ಎಂದು ವರದಿಯಾಗಿದೆ. ವಿವಿಧ ಸಚಿವಾಲಯಗಳ ವೆಚ್ಚವನ್ನು ತಗ್ಗಿಸುವಂತೆ ಈಗಾಗಲೇ ಹೇಳಲಾಗಿದ್ದು ಇದೀಗ ಕೆಲವು ಸಚಿವಾಲಯಗಳನ್ನೇ ಮುಚ್ಚುವುದಕ್ಕೆ ಹಣಕಾಸು ಸಚಿವರು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.


Provided by

ಈ ವಿಷಯದಲ್ಲಿ ಸಚಿವ ಸಂಪುಟದಲ್ಲಿ ತೀವ್ರ ವಾಗ್ವಾದ ಉಂಟಾಗಿದೆ ಎಂದು ಕೂಡ ಇಸ್ರೇಲಿ ಮಾಧ್ಯಮಗಳು ವರದಿ ಮಾಡಿವೆ.
ಹಲವು ಬಿಸಿನೆಸ್ ಸಂಸ್ಥೆಗಳನ್ನು ಮುಚ್ಚಲಾಗಿದೆ. ಸುಮಾರು 40 ಸಾವಿರದಷ್ಟು ಬಿಸಿನೆಸ್ ಸಂಸ್ಥೆಗಳು ಮುಚ್ಚುವ ಭೀತಿಯಲ್ಲಿದೆ ಎಂದು ವರದಿಯಾಗಿದೆ ಪ್ರವಾಸೋದ್ಯಮ ಕ್ಷೇತ್ರವಂತೂ ಸಂಪೂರ್ಣ ಕುಸಿದು ಹೋಗಿದೆ. ಖರ್ಚಿಗಾಗಿ ಕೋಟ್ಯಾಂತರ ರೂಪಾಯಿಯನ್ನು ಸಾಲ ಪಡೆಯಲಾಗಿದೆ.

ಹಿಝ್ಬುಲ್ಲ ಅಕ್ರಮಣದ ಕಾರಣದಿಂದಾಗಿ ಪಶ್ಚಿಮ ಇಸ್ರೇಲ್ ನಿಂದ ಜನರು ಭಾರಿ ಸಂಖ್ಯೆಯಲ್ಲಿ ವಲಸೆ ಬಂದಿದ್ದು ಈ ಪ್ರದೇಶದಲ್ಲಿ ಅರ್ಥ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಅಕ್ರಮಣ ಭೀತಿಯ ಸೈರನ್ ಆಗಾಗ ಮೊಲಗುತ್ತಿರುವುದರಿಂದ ಜನರು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ದೇಶದ ಒಳಗೆ ಸ್ಫೋಟಗಳು ಕೂಡ ನಡೆಯುತ್ತಿವೆ. ದ್ವಿಪೌರತ್ವ ಇರುವ ಲಕ್ಷಾಂತರ ಮಂದಿ ಇಸ್ರೇಲ್ಗೆ ವಿದಾಯ ಹೇಳಿದ್ದಾರೆ.

ಇದರಿಂದಾಗಿ ಗ್ರಾಹಕರು ಕಡಿಮೆಯಾಗಿದ್ದಾರೆ ಮತ್ತು ವ್ಯಾಪಾರ ವಹಿವಾಟುಗಳು ಕುಸಿತವಾಗಿವೆ. ಯುದ್ಧ ಯಾವಾಗ ಕೊನೆಗೊಂಡೀತು ಎಂಬ ಬಗ್ಗೆ ಖಚಿತತೆ ಇಲ್ಲದೆ ಇರುವುದರಿಂದ ನಾಗರಿಕರು ಹತಾಶರಾಗಿದ್ದಾರೆ ಎಂದು ತಿಳಿದು ಬಂದಿದೆ. ಹಾಗೆಯೇ ಯುದ್ಧ ಇನ್ನಷ್ಟು ವಿಸ್ತರಿಸಿಕೊಂಡು ಹೋಗುವ ಸೂಚನೆಯನ್ನು ಇರಾನ್ ಮತ್ತು ಇತರ ಕಡೆಗಳ ಸುದ್ದಿಗಳು ನೀಡುತ್ತಿವೆ.. ಇಸ್ರೇಲ್ ನೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡಿದ್ದ ನೆರೆಯ ಅರಬ್ ರಾಷ್ಟ್ರಗಳು ಕೂಡ ಈಗ ಇಸ್ರೇಲ್ ಗೆ ತಿರುಗಿ ಬಿದ್ದಿವೆ‌‌. ಈ ನಡುವೆ ಅಮೆರಿಕವು ಸುಮಾರು 17 ಕೋಟಿ ಡಾಲರ್ ಮೊತ್ತದ ಶಸ್ತ್ರಾಸ್ತ್ರವನ್ನು ಇಸ್ರೇಲ್ ಗೆ ನೀಡಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ