ಗಾಝಾದ ವಿರುದ್ಧ ವರ್ಷದ ಕೊನೆಯವರೆಗೂ ಹೋರಾಟ: ಇಸ್ರೇಲ್ ಹೇಳಿಕೆ

ಗಾಝಾದ ವಿರುದ್ಧ ಈ ವರ್ಷದ ಕೊನೆಯವರೆಗೆ ಹೋರಾಟ ನಡೆಸಲಿರುವುದಾಗಿ ಇಸ್ರೇಲ್ ನ ರಾಷ್ಟ್ರೀಯ ಸುರಕ್ಷಾ ಮೇಧಾವಿ ಸಾಚಿ ಹನಾಗ್ಬಿ ಹೇಳಿದ್ದಾರೆ. ಹಮಾಸ್ ಮತ್ತು ಫೆಲೆಸ್ತೀನ್ ಇಸ್ಲಾಮಿಕ್ ಜಿಹಾದ್ ನ ಸೇನಾ ಸಾಮರ್ಥ್ಯವನ್ನು ನಾಶ ಮಾಡಬೇಕಾದರೆ ಇನ್ನೂ ಏಳು ತಿಂಗಳ ಅಗತ್ಯ ಇದೆ ಎಂದವರು ಹೇಳಿದ್ದಾರೆ.
ಗಾಝಾದ ವಿರುದ್ಧ ಇಸ್ರೇಲ್ ಡಾಳಿಗೆ ಜಾಗತಿಕ ವಿರೋಧ ವ್ಯಕ್ತವಾಗುತ್ತಿರುವಾಗ ಮತ್ತು ದಿನೇ ದಿನೇ ಇಸ್ರೇಲ್ ಒಂಟಿಯಾಗುತ್ತಿರುವ ಈ ಸಂದರ್ಭದಲ್ಲೇ ಈ ಹೇಳಿಕೆ ಹೊರ ಬಿದ್ದಿದೆ. ಗಾಝಾದಲ್ಲಿ ಏರುತ್ತಿರುವ ಮರಣ ಸಂಖ್ಯೆಯ ಬಗ್ಗೆ ಅಮೆರಿಕ ಸಹಿತ ಜಗತ್ತಿನ ಎಲ್ಲ ರಾಷ್ಟ್ರಗಳು ಕಳವಳ ವ್ಯಕ್ತಪಡಿಸುತ್ತಿವೆ. ಇದೇ ವೇಳೆ ರಫಾದ ಮೇಲಿನ ಇಸ್ರೇಲ್ ನ ದಾಳಿಯನ್ನು ಈಜಿಪ್ಟ್ ತೀವ್ರವಾಗಿ ಖಂಡಿಸಿದೆ. ಹಾಗೆಯೇ ಗಾಝಾದ ಭವಿಷ್ಯದ ಕುರಿತಂತೆ ಇಸ್ರೇಲ್ ನ ನಿಲುವಿನ ಬಗ್ಗೆ ಈಜಿಪ್ಟ್ ಆತಂಕ ವ್ಯಕ್ತಪಡಿಸಿದೆ. ಬಹುತೇಕ ಗಾಝಾವನ್ನು ಇಸ್ರೇಲ್ ನಾಶಪಡಿಸಿದೆ. ಗಾಝಾದ ಹೆಚ್ಚಿನ ಮಂದಿ ನಿರಾಶ್ರಿತ ಶಿಬಿರದಲ್ಲಿ ವಾಸಿಸುತ್ತಿದ್ದಾರೆ.
ಈವರೆಗಿನ ಯುದ್ಧದಲ್ಲಿ 290 ಇಸ್ರೇಲಿ ಸೈನಿಕರು ಮೃತಪಟ್ಟಿದ್ದಾರೆ ಎಂದು ಇಸ್ರೇಲ್ ತಿಳಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth