ಸಿಎಂ ಭೇಟಿ ಮಾಡಿದ ಗೀತಾ ಶಿವರಾಜ್ ಕುಮಾರ್ ದಂಪತಿ - Mahanayaka
12:56 AM Saturday 18 - October 2025

ಸಿಎಂ ಭೇಟಿ ಮಾಡಿದ ಗೀತಾ ಶಿವರಾಜ್ ಕುಮಾರ್ ದಂಪತಿ

shivarajkumar
13/06/2023

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಸರ್ಕಾರಿ ನಿವಾಸದಲ್ಲಿ ಪತ್ನಿ ಗೀತಾ ಅವರ ಜತೆ ಬಂದು ಸಿಎಂ ಭೇಟಿ ಮಾಡಿದ್ದು ನಟ ಶಿವರಾಜ್ ಕುಮಾರ್, ಕೆಲ ಹೊತ್ತು ಅವರೊಂದಿಗೆ ಮಾತನಾಡಿದ್ದಾರೆ. ಆದರೆ ಸಿಎಂ ಜೊತೆ ಏನು ಚರ್ಚಿಸಿದ್ದಾರೆಂಬುದನ್ನು ಶಿವರಾಜ್ ಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿರು. ಪ್ರತಿಕ್ರಿಯೆ ಕೊಡದೇ ತೆರಳಿದರು. ಇನ್ನುಶಿವಣ್ಣ ದಂಪತಿ ಜೊತೆ ಸಚಿವರೂ ಆಗಿರುವ ಗೀತಾ ಸಹೋದರ ಮಧು ಬಂಗಾರಪ್ಪ ಕೂಡ ಆಗಮಿಸಿದ್ದರು.


Provided by

ನಿರಂತರ ಚಿತ್ರೀಕರಣ ಮಧ್ಯೆಯೂ ಶಿವರಾಜ್ ಕುಮಾರ್, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇತ್ತೀಚೆಗಷ್ಟೇ ನಡೆದ ಮಂತ್ರಿಗಳ ಪ್ರಮಾಣ ವಚನ ಕಾರ್ಯಕ್ರಮದಲ್ಲೂ ಶಿವಣ್ಣ ಪತ್ನಿ ಸಮೇತ ಹಾಜರಿದ್ದರು. ವಿಶೇಷವೇನೆಂದರೆ ಶಿವರಾಜ್ಕುಮಾರ್ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಸ್ವತಃ ಕಾರು ಡ್ರೈವ್ ಮಾಡಿಕೊಂಡು ಬಂದಿದ್ದರು.

ಮಧು ಬಂಗಾರಪ್ಪಜಗದೀಶ್ ಶೆಟ್ಟರ್, ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರ ಪರವಾಗಿ ಪ್ರಚಾರ ಮಾಡಿ ಕಾಂಗ್ರೆಸ್ ಗೆಲುವಿಗೆ ಕಾರಣರಾಗಿದ್ದ ಶಿವರಾಜ್ ಕುಮಾರ್ ಭೇಟಿಯಾಗಿ ಕಾಂಗ್ರೆಸ್ ಮುಖಂಡ ಸುರ್ಜೆ ವಾಲಾ ಸ್ವತಃ ಶಿವಣ್ಣ ಮನೆಗೆ ಬಂದಿದ್ದರು.ಕಾಂಗ್ರೆಸ್ನ ಕೆಲವರ ಗೆಲುವಿನ ಹಿಂದೆ ಗೀತಾ ಹಾಗೂ ಶಿವರಾಜ್ ಕುಮಾರ್ ಪ್ರಭಾವವನ್ನು ತಳ್ಳಿಹಾಕಲಾಗದು.

shivarak kumar 1

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ