ಜಾಹೀರಾತು ಫಲಕ ಕುಸಿದು 16 ಮಂದಿಯ ಸಾವಿಗೆ ಕಾರಣನಾಗಿದ್ದ ಆರೋಪಿ ಅಂದರ್

ಮುಂಬೈನಲ್ಲಿ ನಡೆದಿದ್ದ ಜಾಹೀರಾತು ಫಲಕ ಕುಸಿದು 16 ಮಂದಿ ಮೃತಪಟ್ಟ ಪ್ರಕರಣದ ಪ್ರಮುಖ ಆರೋಪಿ ಭವೇಶ್ ಭಿಂಡೆಯನ್ನು ಮುಂಬೈ ಪೊಲೀಸರು ರಹಸ್ಯ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಆತ ಘಟನೆ ನಡೆದ ನಂತರ, ಮೂರು ದಿನಗಳಿಂದ ತಲೆಮರೆಸಿಕೊಂಡಿದ್ದ.
120 ಚದರ ಅಡಿಯ ಬೃಹತ್ ಜಾಹೀರಾತು ಫಲಕವು ಕುಸಿತಗೊಂಡಿದ್ದರಿಂದ 16 ಮಂದಿ ಮೃತಪಟ್ಟು, 75 ಮಂದಿ ಗಾಯಗೊಂಡಿದ್ದರು.
ಪೊಲೀಸರು ತನ್ನ ಬೆನ್ನು ಹತ್ತಿದ್ದಾರೆ ಎಂಬ ಸುಳಿವು ದೊರೆಯುತ್ತಿದ್ದಂತೆಯೆ ಮುಂಬೈನಿಂದ ಪರಾರಿಯಾಗಿದ್ದ ಭವೇಶ್ ಭಿಂಡೆ, ಹಲವಾರು ನಗರಗಳಲ್ಲಿ ತಲೆ ಮರೆಸಿಕೊಂಡಿದ್ದ. ತನ್ನ ಬಂಧನವನ್ನು ತಪ್ಪಿಸಿಕೊಳ್ಳಲು ಆತ ತನ್ನ ಸ್ಥಳವನ್ನು ಪದೇ ಪದೇ ಬದಲಾಯಿಸುತ್ತಿದ್ದ ಹಾಗೂ ನಕಲಿ ಗುರುತನ್ನು ಹೇಳಿಕೊಂಡಿದ್ದ.
ಉದಯ್ ಪುರ್ ಹೋಟೆಲೊಂದರಲ್ಲಿ ನಕಲಿ ಹೆಸರಿನಲ್ಲಿ ಅವಿತುಕೊಂಡಿದ್ದ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆತನ ಪತ್ತೆಗಾಗಿ ನಿಯೋಜನೆಗೊಂಡಿದ್ದ ಎಂಟು ತಂಡಗಳು ಹಗಲಿರುಳೂ ಕಾರ್ಯಾಚರಣೆ ನಡೆಸಿ, ಆತನನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿವೆ.
ಉದಯ್ ಪುರ್ ಕಾರ್ಯಾಚರಣೆಯು ಎಷ್ಟು ರಹಸ್ಯವಾಗಿತ್ತೆಂದರೆ, ಭಿಂಡೆಯನ್ನು ಸೆರೆ ಹಿಡಿಯಲು ಮುಂಬೈ ಪೊಲೀಸರ ತಂಡವು ಉದಯ್ ಪುರ್ ನಲ್ಲಿದೆ ಎಂಬ ಮಾಹಿತಿಯನ್ನು ಸ್ಥಳೀಯ ಪೊಲೀಸರಿಗೂ ನೀಡಲಾಗಿರಲಿಲ್ಲ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth