‘ಭಾರತ್ ಜೋಡೋ’ ಅಲ್ಲ, ಮೊದಲು ‘ಕಾಂಗ್ರೆಸ್ ಜೋಡೋ’ ಮಾಡಿ: ರಾಜೀನಾಮೆ ಪತ್ರದಲ್ಲಿ ಗುಲಾಂ ನಬಿ ಆಜಾದ್ - Mahanayaka
2:02 AM Thursday 13 - November 2025

‘ಭಾರತ್ ಜೋಡೋ’ ಅಲ್ಲ, ಮೊದಲು ‘ಕಾಂಗ್ರೆಸ್ ಜೋಡೋ’ ಮಾಡಿ: ರಾಜೀನಾಮೆ ಪತ್ರದಲ್ಲಿ ಗುಲಾಂ ನಬಿ ಆಜಾದ್

ghulam nabi azad
26/08/2022

ಕಾಂಗ್ರೆಸ್ ನ ಹಿರಿಯ ನಾಯಕ ಗುಲಾಂ ನಬಿ ಆಜಾದ್(Ghulam Nabi Azad ) ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಪಕ್ಷ ತೊರೆಯುವ ವೇಳೆ ಕಾಂಗ್ರೆಸ್ ಗೆ ಕಿವಿ ಮಾತು ಹೇಳಿರುವ ಅವರು, ‘ಭಾರತ್ ಜೋಡೋ’ ಕಾರ್ಯಕ್ರಮ ಮಾಡುವ ಬದಲು ‘ಕಾಂಗ್ರೆಸ್ ಜೋಡೋ’ ಕಾರ್ಯಕ್ರಮ ಮಾಡಿ ಎಂದಿದ್ದಾರೆ.

ಪಕ್ಷದ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ರಾಜೀನಾಮೆ ನೀಡಿರುವ ಗುಲಾಂ ನಬಿ ಆಜಾದ್ ಪಕ್ಷದ ನಾಯಕಿ ಸೋನಿಯಾ ಗಾಂಧಿ ಅವರಿಗೆ 4 ಪುಟಗಳ ಸುದೀರ್ಘ ಪತ್ರವನ್ನು ಬರೆದಿದ್ದಾರೆ. ಪತ್ರದಲ್ಲಿ ರಾಹುಲ್ ಗಾಂಧಿ ಅವರ ನಡೆಯನ್ನು ತೀಕ್ಷ್ಣವಾಗಿ ಖಂಡಿಸಿದ್ದಾರೆ.

ರಾಹುಲ್ ಗಾಂಧಿ ಬಾಲಿಶ ತನದ ವರ್ತನೆ ಮಾಡುತ್ತಾರೆ. 2014ರ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲನುಭಸಲು ರಾಹುಲ್ ಗಾಂಧಿಯೇ ನೇರ ಕಾರಣ ಎಂದು ಅವರು ಆರೋಪಿಸಿದ್ದಾರೆ.

ಅನುಭವಿ ಹಿರಿಯ ನಾಯಕರನ್ನು ಬದಿಗೊತ್ತಿ, ರಾಜಕೀಯ ಅನುಭವವಿಲ್ಲದವರು ಪಕ್ಷದ ನೇತೃತ್ವ ವಹಿಸಿದ್ದರಿಂದಾಗಿ  ಕಾಂಗ್ರೆಸ್ ಸೋಲನುಭವಿಸುತ್ತಿದೆ.  ಇಂತಹ ಸಂದರ್ಭದಲ್ಲಿಯೇ ಕಾಂಗ್ರೆಸ್ ಪಕ್ಷದ ವತಿಯಿಂದ ‘ಭಾರತ್ ಜೋಡೋ’ ಕಾರ್ಯಕ್ರಮ ಮಾಡುತ್ತಿದ್ದೀರಿ. ಮೊದಲು ‘ಕಾಂಗ್ರೆಸ್ ಜೋಡೋ’ ಮಾಡಿ ಎಂದು ಅವರು ಕಿವಿಮಾತು ಹೇಳಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ