‘ಬುರುಡೆ’ ಎಂದವರ ಬುರುಡೆಗೆ ಟೆನ್ಷನ್ ಕೊಟ್ಟ ಗಿರೀಶ್ ಮಟ್ಟಣನವರ್: ಈ ಬಾರಿ ಬುರುಡೆ ಬಿಸಿಯಾಗುತ್ತಾ!? - Mahanayaka
12:55 PM Wednesday 22 - October 2025

 ‘ಬುರುಡೆ’ ಎಂದವರ ಬುರುಡೆಗೆ ಟೆನ್ಷನ್ ಕೊಟ್ಟ ಗಿರೀಶ್ ಮಟ್ಟಣನವರ್: ಈ ಬಾರಿ ಬುರುಡೆ ಬಿಸಿಯಾಗುತ್ತಾ!?

girish mattannanavar
30/08/2025

ಮಂಗಳೂರು: ಧರ್ಮಸ್ಥಳ ಪ್ರಕರಣವು ಸಾಕ್ಷಿದೂರುದಾರನ ಬಂಧನದೊಂದಿಗೆ ಎಲ್ಲವೂ ಮುಗಿಯಿತು ಅಂತ ಮಾಧ್ಯಮ ವರದಿಗಳು ಹಾಗೂ ಕೆಲವರು ವದಂತಿಗಳನ್ನು ಹಬ್ಬಿದ ಬೆನ್ನಲ್ಲೇ ಈ ಪ್ರಕರಣ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಈ ಪ್ರಕರಣದಲ್ಲಿ ಏನಿಲ್ಲ, ಇದು ಬರೇ ಬುರುಡೆ ಕಥೆ ಎಂದವರಿಗೆ ಸೌಜನ್ಯ ಪರ ಹೋರಾಟಗಾರ, ಮಾಜಿ ಪೊಲೀಸ್ ಅಧಿಕಾರಿಯೂ ಆಗಿರುವ ಗಿರೀಶ್ ಮಟ್ಟಣನವರು ಇದೀಗ ಎಸ್ ಐಟಿಗೆ ನೀಡಿರುವ ದಾಖಲೆ ಬುರುಡೆ ಬಿಸಿ ಮಾಡುವಂತೆ ಮಾಡಿದೆ.

ಹೌದು..! ವರದಿಗಳ ಪ್ರಕಾರ ಗಿರೀಶ್ ಮಟ್ಟಣನವರು 500 ಪುಟಗಳ ದಾಖಲೆಯನ್ನ ಎಸ್ ಐಟಿ ಅಧಿಕಾರಿಗಳಿಗೆ ನೀಡಿದ್ದು, ಈ ದಾಖಲೆಗಳು ಈ ಪ್ರಕರಣದಲ್ಲಿ ಪ್ರಮುಖ ಪಾತ್ರವಹಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಧರ್ಮಸ್ಥಳದಲ್ಲಿ ನಡೆದ ಅಸಹಜ ಸಾವುಗಳ ತನಿಖೆಯನ್ನ ಧರ್ಮಸ್ಥಳ ಪೊಲೀಸರು ಸರಿಯಾದ ರೀತಿಯಲ್ಲಿ ತನಿಖೆ ನಡೆಸಿಲ್ಲ,  ಆ ಸಾವುಗಳ ತನಿಖೆಯನ್ನ  ನಡೆಸಿ ಅಂತ ಎಸ್ ಐಟಿ ಅಧಿಕಾರಿಗಳಿಗೆ ಗಿರೀಶ್ ಮಟ್ಟಣನವರು ದಾಖಲೆ ನೀಡಿದ್ದಾರೆ.

ಅಸಹಜ ಸಾವುಗಳ ತನಿಖೆ ನಡೆಸಲು ಧರ್ಮಸ್ಥಳ ಪೊಲೀಸರು ವಿಫಲರಾಗಿದ್ದಾರೆ. ಇದರ ತನಿಖೆ ನಡೆಸದಿರಲು ಕಾರಣ ಏನು? ಎಂಬ ಬಗ್ಗೆ ನಮಗೆ ಅನುಮಾನವಿದೆ ಎಂದು ಅವರು ಉಲ್ಲೇಖಿಸಿದ್ದಾರೆ. ಅಲ್ಲದೇ ಗಿರೀಶ್ ಮಟ್ಟಣ್ಣನವರ್ ಅವರಿಂದ ಧರ್ಮಸ್ಥಳ ಪಂಚಾಯಿತಿ ದಾಖಲೆ ಫೋರ್ಜರಿ ದಾಖಲೆ ಬಿಡುಗಡೆ ಮಾಡಿರುವ ಹಿನ್ನೆಲೆ ಧರ್ಮಸ್ಥಳ ಪಂಚಾಯಿತಿ ಅಧಿಕಾರಿಗಳಿಗೆ ಎಸ್ ಐಟಿಯಿಂದ ಬುಲಾವ್ ನೀಡಲಾಗಿದೆ.

ಸದ್ಯ ಕರ್ತವ್ಯ ನಿರ್ವಹಿಸುತ್ತಿರುವ ಪಿಡಿಒ, ಪಂಚಾಯತ್ ಅಧಿಕಾರಿಗಳಿಗೆ ವಿಚಾರಣೆಗೆ ಹಾಜರಾಗಲು ಎಸ್‌ ಐಟಿ ಸೂಚಿಸಿತ್ತು. ದಾಖಲೆ ತೆಗೆದುಕೊಂಡು ಬಂದಿದ್ದಾರೆ. ಮಟ್ಟಣ್ಣನವರ್ ದಾಖಲೆ ಜೊತೆ ಪಂಚಾಯತ್ ದಾಖಲೆಗಳ ಸಾಮ್ಯತೆ ಪರಿಶೀಲನೆ ಮಾಡಲಾಗುವುದು. ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ