ನಟ ದರ್ಶನ್ ಗೆ ಮರಣ ದಂಡನೆ ಕೊಡಿ: ಕೋರ್ಟ್ ಹಾಲ್ ಗೆ ನುಗ್ಗಿ ಒತ್ತಾಯಿಸಿದ ಅನಾಮಿಕ! - Mahanayaka

ನಟ ದರ್ಶನ್ ಗೆ ಮರಣ ದಂಡನೆ ಕೊಡಿ: ಕೋರ್ಟ್ ಹಾಲ್ ಗೆ ನುಗ್ಗಿ ಒತ್ತಾಯಿಸಿದ ಅನಾಮಿಕ!

actor darshan
04/09/2025

ಬೆಂಗಳೂರು:   ರೇಣುಕಾಸ್ವಾಮಿ ಕೊಲೆ ಕೇಸ್‌ ನಲ್ಲಿ ನಟ ದರ್ಶನ್‌ ರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸುವುದಕ್ಕೆ ಸಂಬಂಧಪಟ್ಟ ಅರ್ಜಿಯ ವಿಚಾರಣೆಯು ಬುಧವಾರ ಬೆಂಗಳೂರು ನಗರದ 64ನೇ ಸೆಷನ್ಸ್‌ ನ್ಯಾಯಾಲಯದಲ್ಲಿ ನಡೆಯುತ್ತಿತ್ತು.

ನಟನ ಪರ ವಾದ ಆಲಿಸಿದ ನ್ಯಾಯಾಧೀಶರು ವಿಚಾರಣೆಯನ್ನು ಸೆಪ್ಟೆಂಬರ್ 9 ಕ್ಕೆ ಮುಂದೂಡಿದರು. ಈ ವೇಳೆ ಕೋರ್ಟ್‌ಗೆ ಅನಾಮಿಕ ನುಗ್ಗಿ ಬಂದು ಪತ್ರ ಹಿಡಿದು ಮನವಿ ಮಾಡಿದ ಘಟನೆ ನಡೆದಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಗೆ  ಮರಣ ದಂಡನೆ ಕೊಡಿ ಎಂದು ಆ ಅನಾಮಿಕ ವ್ಯಕ್ತಿ ಬೆಂಗಳೂರು ನಗರ ಕೋರ್ಟ್ ನ್ಯಾಯಾಧೀಶರ ಮುಂದೆ ಮನವಿ ಮಾಡಿದ್ದಾನೆ.

ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಆರೋಪಿಗಳಿಗೆ ಬೇಲ್‌ ಕೊಡಬಾರದು ಎಂದು ಕೋರ್ಟ್ ಗೆ ಬಂದ ವ್ಯಕ್ತಿ ಹೇಳಿದ್ದಾನೆ. ಆಗ ನ್ಯಾಯಾಧೀಶಕರು ಯಾರು ನೀವು? ಎಂದು ಪ್ರಶ್ನೆ ಮಾಡಿದ್ದು, ನಾನು ರವಿ ಬೆಳಗೆರೆ ಕಡೆಯವರು ಎಂದು ಆ ವ್ಯಕ್ತಿ ಉತ್ತರ ನೀಡಿದ್ದಾನೆ. ಆ ನ್ಯಾಯಾಧೀಶರು ನಿಮ್ಮ ಅರ್ಜಿ, ಮನವಿ ಏನೇ ಇದ್ದರೂ ಸರ್ಕಾರದ ಕಡೆಯಿಂದ ಬರಲಿ ಎಂದು ಸೂಚನೆ ನೀಡಿದ್ದಾರೆ. ಆ ಬಳಿಕ ಅನಾಮಿಕ ಕೋರ್ಟ್‌ನಿಂದ ಹೊರ ಹೋಗಿದ್ದಾನೆ  ಎಂದು ವರದಿಗಳಿಂದ ತಿಳಿದು ಬಂದಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಪವಿತ್ರಾ ಗೌಡ ಅವರ ಜಾಮೀನು ಅರ್ಜಿಯನ್ನು 57ನೇ ಸೆಷನ್ಸ್ ನ್ಯಾಯಾಲಯವು ತಿರಸ್ಕರಿಸಿದೆ. ನಟ ದರ್ಶನ್ ಸೇರಿದಂತೆ ಈ ಪ್ರಕರಣದ 7 ಆರೋಪಿಗಳ ಜಾಮೀನನ್ನು ಸುಪ್ರೀಂ ಕೋರ್ಟ್ ಆಗಸ್ಟ್ 14 ರಂದು ರದ್ದು ಮಾಡಿತ್ತು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ