ಪಕ್ಷಗಳ  ಮುಖಂಡರು ಹಣ, ವಸ್ತು ರೂಪದ ಆಮಿಷ ಒಡ್ಡಿದರೆ ಮಾಹಿತಿ ನೀಡಿ: ಜಿಲ್ಲಾಧಿಕಾರಿ ರವಿಕುಮಾರ್‌ ಮನವಿ - Mahanayaka

ಪಕ್ಷಗಳ  ಮುಖಂಡರು ಹಣ, ವಸ್ತು ರೂಪದ ಆಮಿಷ ಒಡ್ಡಿದರೆ ಮಾಹಿತಿ ನೀಡಿ: ಜಿಲ್ಲಾಧಿಕಾರಿ ರವಿಕುಮಾರ್‌ ಮನವಿ

dc ravikumar
02/04/2023


Provided by

ಯಾವುದೇ ಪಕ್ಷದ ಮುಖಂಡರು, ಅಭ್ಯರ್ಥಿಗಳು ಅಥವಾ ಕಾರ್ಯಕರ್ತರು ಹಣ, ವಸ್ತು ರೂಪದ ಉಡುಗೊರೆ ಅಥವಾ ಇನ್ನಿತರ ಆಮಿಷವೊಡ್ಡಿದರೆ ಮಾಹಿತಿ ನೀಡುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್‌ ಎಂ.ಆರ್‌. ಮನವಿ ಮಾಡಿದ್ದಾರೆ.

ಅವರು ಮಂಗಳೂರಲ್ಲಿ ಸುದ್ದಿಗಾರರ ಜೊತೆ ಮಾತನಾಡಿದರು. ‘ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿ ಸಿ–ವಿಜಿಲ್‌ ಆ್ಯಪ್‌ ಅಥವಾ ಸಹಾಯವಾಣಿ ( 1950 )  ಮೂಲಕ ಮಾಹಿತಿ ನೀಡಬಹುದು. ಈ ದೂರುಗಳ ಬಗ್ಗೆ ಕೇಂದ್ರ ಚುನಾವಣಾ ಆಯೋಗವೇ ಪರಿಶೀಲನೆ ನಡೆಸಲಿದೆ. ಮಾಹಿತಿ ನೀಡಿದವರ ವಿವರಗಳನ್ನು ಗೋಪ್ಯವಾಗಿಡಲಾಗುತ್ತದೆ ಎಂದರು.

ರಾಜಕೀಯ ಮುಖಂಡರು, ಅಭ್ಯರ್ಥಿಗಳು ಅಥವಾ ಕಾರ್ಯಕರ್ತರು ಚುನಾವಣಾ ಸಂದರ್ಭದಲ್ಲಿ ಮತದಾರರಿಗೆ ಟೋಕನ್‌/ ರಹಸ್ಯ ಸಂಖ್ಯೆ ಅಥವಾ ಸಂಕೇತ ನೀಡಿ ಅದರ ಆಧಾರಗಳಲ್ಲಿ, ಚಿನ್ನದ ಮೂಗಿನ ಬೊಟ್ಟು. ಕಿವಿಯೋಲೆ, ಹೊಸ ಬಟ್ಟೆ, ಪೆಟ್ರೋಲ್‌ ಖರೀದಿಗೆ ಅವಕಾಶ ಕಲ್ಪಿಸಿ  ಆಮಿಷ ಒಡ್ಡುವ  ಅಕ್ರಮಗಳು ಈ ಹಿಂದೆ ಕೆಲವೆಡೆ ನಡೆದಿವೆ. ನಮ್ಮ ಜಿಲ್ಲೆಯಲ್ಲಿ ಆಭರಣ ಮಳಿಗೆಗಳು, ಆಭರಣ ತಯಾರಕರು, ಪೆಟ್ರೋಲ್‌ ಬಂಕ್‌, ಪೆಟ್ರೋಲ್‌ ಬಂಕ್‌, ಸೀಮೆಎಣ್ಣೆ ಮಾರಾಟ ಮಳಿಗೆಗಳು, ವಾಹನ ಬ್ರೋಕರ್‌ಗಳು, ಲೇವಾದೇವಿದಾರರು  ಅಥವಾ ಈ ರೀತಿ ಚಟುವಟಿಕೆಗಳಲ್ಲಿ  ತೊಡಗಿರುವ ಇತರ ವ್ಯಕ್ತಿಗಳನ್ನು ಬಳಸಿ ಚುನಾವಣಾ ಅಕ್ರಮಗಳನ್ನು ನಡೆಸುವ ಬಗ್ಗೆಯೂ ಅಧಿಕಾರಿಗ ತಂಡ ಳು ನಿಗಾ ಇಡಲಿದೆ. ಈ ತಂಡದ ಸದಸ್ಯರು ಮಫ್ತಿಯಲ್ಲಿ ತೆರಳಿ ಪರಿಶೀಲನೆ ನಡೆಸಲಿದ್ದಾರೆ. ಇಂತಹ ಅಕ್ರಮಗಳ ಬಗ್ಗೆಯೂ ಸಾರ್ವಜನಿಕರು ಚುನಾವಣಾಧಿಕಾರಿಯವರ ಗಮನಕ್ಕೆ ತರಬಹುದು’ ಎಂದರು.

ಯಕ್ಷಗಾನ ಮತ್ತಿತರ ಕಲಾ ಪ್ರದರ್ಶನದಲ್ಲಿ ಕಲಾವಿದರು ಪರೋಕ್ಷವಾಗಿ ನಿರ್ದಿಷ್ಟ ಪಕ್ಷದ ಅಥವಾ ರಾಜಕೀಯ ಮುಖಂಡರಿಗೆ ಅನುಕೂಲವಾಗುವಂತೆ ನಡೆದುಕೊಳ್ಳುವ ಬಗ್ಗೆಯೂ ಅಧಿಕಾರಿಗಳು ನಿಗಾ ಇಡಲಿದ್ದಾರೆ ಅಂದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

ಇತ್ತೀಚಿನ ಸುದ್ದಿ