ಶರಣಾಗುವವರಿಗೆ  ಕೊಡುವ ಪರಿಹಾರ ನಮಗೂ ನೀಡಿ: ನಕ್ಸಲ್ ವಿಕ್ರಂ ಗೌಡ ಸಹೋದರಿ ಸರ್ಕಾರಕ್ಕೆ ಮನವಿ - Mahanayaka
11:56 AM Tuesday 21 - October 2025

ಶರಣಾಗುವವರಿಗೆ  ಕೊಡುವ ಪರಿಹಾರ ನಮಗೂ ನೀಡಿ: ನಕ್ಸಲ್ ವಿಕ್ರಂ ಗೌಡ ಸಹೋದರಿ ಸರ್ಕಾರಕ್ಕೆ ಮನವಿ

vikram gowda
08/01/2025

ಉಡುಪಿ: ನಕ್ಸಲ್ ವಿಕ್ರಂ ಗೌಡ ಎನ್ ಕೌಂಟರ್ ಬೆನ್ನಲ್ಲೇ ಇತರ ನಕ್ಸಲರು ಸರ್ಕಾರಕ್ಕೆ ಶರಣಾಗತಿ ಘೋಷಿಸಿದ್ದಾರೆ. ಇದೇ ಸಂದರ್ಭದಲ್ಲಿ ಶರಣಾಗುವ ನಕ್ಸಲರ ಪುನರ್ವಸತಿಗೆ ಸರ್ಕಾರ ನೀಡುವ ಪರಿಹಾರ ನಮಗೂ ನೀಡಬೇಕು ಎಂದು ವಿಕ್ರಂ ಗೌಡ ಸಹೋದರಿ ಮನವಿ ಮಾಡಿಕೊಂಡಿದ್ದಾರೆ.

ರಾಜ್ಯದಲ್ಲಿ ನಕ್ಸಲ್ ಶರಣಾಗತಿ ವಿಚಾರವಾಗಿ  ಮಾಧ್ಯಮಗಳ ಜೊತೆಗೆ ಮಾತನಾಡಿದ ವಿಕ್ರಂ ಗೌಡ ಸಹೋದರಿ ಸುಗುಣ, ಅಣ್ಣನ ಜೀವ ವಾಪಸ್ ಕೊಡಲು ಸಾಧ್ಯವಿಲ್ಲ, ಪರಿಹಾರವಾದರೂ ನೀಡಿ ಎಂದು ಮನವಿ ಮಾಡಿದ್ದಾರೆ.

ನಾವು ಕಷ್ಟದಲ್ಲಿದ್ದೇವೆ. ಸ್ವಂತ ಮನೆಯಾಗಬೇಕಿದೆ. ಒಂದು ದಿನ ಕೆಲಸಕ್ಕೆ ಹೋಗದಿದ್ದರೂ ನಮ್ಮ ದಿನ ಸಾಗುವುದಿಲ್ಲ, ಸರೆಂಡರ್ ಆಗುವವರಿಗೆ ಕೊಡುವ ಪರಿಹಾರ ನಮಗೂ ಕೊಡಿ ಸಾಕು ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/Ci8F6ckDmAbCBQyqgLqOPx

ಇತ್ತೀಚಿನ ಸುದ್ದಿ