ಅರಮನೆ ತಲಗೂರು ಗ್ರಾಮದಲ್ಲಿ ವಿಜೃಂಭಣೆಯ ಸುಗ್ಗಿ ಹಬ್ಬದ ಉತ್ಸವ - Mahanayaka
10:31 AM Wednesday 20 - August 2025

ಅರಮನೆ ತಲಗೂರು ಗ್ರಾಮದಲ್ಲಿ ವಿಜೃಂಭಣೆಯ ಸುಗ್ಗಿ ಹಬ್ಬದ ಉತ್ಸವ

suggi
07/04/2025


Provided by

ಕೊಟ್ಟಿಗೆಹಾರ: ಮೂಡಿಗೆರೆ ತಾಲೂಕಿನ ಅರಮನೆ ತಲಗೂರು ಗ್ರಾಮದಲ್ಲಿ ವಿಜೃಂಭಣೆಯ ಸುಗ್ಗಿ ಹಬ್ಬ ನಡೆಯಿತು.

ಅಜ್ಜಮ್ಮ ಹಾಗೂ ನಾಗಲಮ್ಮ ದೇವರುಗಳ ಜಾತ್ರಾ ಮಹೋತ್ಸವ ಒಂದು ವಾರದಿಂದ ನಡೆಯುತ್ತಿದೆ, ಭಾನುವಾರ ರಾತ್ರಿಯಿಂದ ಪ್ರಾರಂಭವಾದ ರಾತ್ರಿ ಸುಗ್ಗಿ ಹಾಗೂ ಸೋಮವಾರ ಹಗಲು ಸುಗ್ಗಿ ನಡೆಯಿತು.

ಸುತ್ತಮುತ್ತಲ ನೂರಾರು ಗ್ರಾಮಸ್ಥರು ಜಾತ್ರಾ ಮಹೋತ್ಸವಕ್ಕೆ ಸಾಕ್ಷಿಯಾದರು. ಭಾನುವಾರ ರಾತ್ರಿ ನಿಸಾನಿ ಶಬ್ದಕ್ಕೆ ದೇವರ ಅಡ್ಡಿಯೊಂದಿಗೆ ಯುವಕರು ಹೆಜ್ಜೆ ಹಾಕುವುದು ಕಂಡುಬಂತು. ಸೋಮವಾರ ಬೆಳಗ್ಗೆ ಕೆಂಡೋತ್ಸವ ನಡೆಯಿತು.

ಈ ಜಾತ್ರಾ ಮಹೋತ್ಸವಕ್ಕೆ ಅರಮನೆತಲಗೂರು, ಮಾಳಿಂಗ ನಾಡು, ಹೆಮ್ಮಕ್ಕಿ, ಬಿಳಗಲಿ. ನೆರಂಕಿ, ಬಲಿಗೆ, ಸುಂಕ ಸಾಲೆ,ಕೆಳಗೂರು ಮೊದಲಾದ ಗ್ರಾಮಗಳಿಂದ ನೂರಾರು ಭಕ್ತರು ಆಗಮಿಸಿದ್ದರು.

ಈ ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರಾದ, ಲೋಕಪ್ಪ ಗೌಡ, ಕೃಷ್ಣೇಗೌಡ, ಅಭಿಜಿತ್, ಮಂಜಪ್ಪ ಶೆಟ್ಟಿ, ಶಂಕರ್ ಶೆಟ್ಟಿ, ಲಕ್ಷ್ಮಣ್ ಗೌಡ್ರು, ಶಂಕರಗೌಡ, ರವಿಚಂದ್ರ, ಸುಧಾಕರ, ರಾಮಚಂದ್ರ, ರತ್ನಾಕರ್, ಅಶ್ವಥ್, ಸುದರ್ಶನ್ ಮೊದಲಾದವರು ಇದ್ದರು.


ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4

ಇತ್ತೀಚಿನ ಸುದ್ದಿ