ಗೂಗಲ್ ಮ್ಯಾಪ್ ನೋಡಿ ಕಾರು ಚಾಲನೆ: ಕಾಲುವೆಗೆ ಬಿದ್ದು, 3 ಮಂದಿ ಸಾವು - Mahanayaka
10:03 AM Wednesday 3 - September 2025

ಗೂಗಲ್ ಮ್ಯಾಪ್ ನೋಡಿ ಕಾರು ಚಾಲನೆ: ಕಾಲುವೆಗೆ ಬಿದ್ದು, 3 ಮಂದಿ ಸಾವು

gogle map
11/02/2022


Provided by

ತಿರುವನಂತಪುರಂ: ಗೂಗಲ್ ಮ್ಯಾಪ್ ನೋಡಿ ಕಾರು ಚಲಾಯಿಸಿದ ಪರಿಣಾಮ ಕಾರು ಕಾಲುವೆಗೆ ಬಿದ್ದು, ಮೂವರು ಮೃತಪಟ್ಟಿರುವ ಘಟನೆ ಕೇರಳದ ಅಡೂರ್ ಬೈಪಾಸ್ ಬಳಿ ನಡೆದಿದೆ.

ಶ್ರೀಜಾ(45), ಶಕುಂತಲಾ(51), ಇಂದಿರಾ(57) ಮೃತಪಟ್ಟವರಾಗಿದ್ದಾರೆ. ಇವರು ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ದಾರಿ ಸರಿಯಾಗಿ ಗೊತ್ತಿಲ್ಲದ ಕಾರಣ ಗೂಗಲ್ ಮ್ಯಾಪ್ ಬಳಸಿ ಕಾರು ಚಾಲನೆ ಮಾಡುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾಲುವೆ ಬಿದ್ದಿದೆ. ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಸ್ಥಳೀಯರೊಡನೆ ಸೇರಿ ನಾಲ್ವರನ್ನು ರಕ್ಷಣೆ ಮಾಡಿದ್ದಾರೆ.

ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕಾರು ವೇಗವಾಗಿ ಹೋಗುತ್ತಿತ್ತು. ಗೂಗಲ್ ಮ್ಯಾಪ್‍ನಂತೆ ಆಡೂರ್ ಬೈಪಾಸ್‍ನಲ್ಲಿ ಕಾರು ಚಾಲಕ ಎಡ ತಿರುವು ತೆಗೆದುಕೊಂಡಿದ್ದಾನೆ. ತಕ್ಷಣವೇ ತಪ್ಪು ದಾರಿಯಲ್ಲ ಹೋಗುತ್ತಿದ್ದೇವೆ ಎಂದು ಚಾಲಕ ಬ್ರೇಕ್ ಹಾಕುವ ಬದಲು ಕಾರಿನ ಆಕ್ಸಿಲೇಟರ್ ತುಳಿದಿದ್ದಾನೆ. ಬಳಿಕ ಕಾರು ಚಾಲಕನ ನಿಯಂತ್ರಣ ತಪ್ಪಿ ಕಾಲುವೆಯಲ್ಲಿ ಬಿದ್ದಿದೆ ಎಂದು ಗಾಯಾಳು ಒಬ್ಬರು ಹೇಳಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಎನ್‌ ಐಟಿಕೆ ಟೋಲ್‌ಗೇಟ್‌ ವಿರುದ್ಧ ಕೆಸರು ನೀರಲ್ಲಿ ಕುಳಿತು ವಿನೂತನ ಪ್ರತಿಭಟನೆ

ಜಿ.ಪಂ., ತಾ.ಪಂ. ಚುನಾವಣೆ: ಎಸ್ಸಿ, ಎಸ್ಟಿಗೆ ಮಾತ್ರ ಮೀಸಲಾತಿ: ಸಚಿವ ಈಶ್ವರಪ್ಪ

ಶಾಲಾ ಕಾಲೇಜುಗಳಲ್ಲಿ ಕೇಸರಿ ಶಾಲು ಧರಿಸಬೇಡಿ: ಆರೆಸ್ಸೆಸ್ ಸೂಚನೆ

ಅಪಾರ್ಟ್‍ಮೆಂಟ್ ಛಾವಣಿ ಕುಸಿದು ಇಬ್ಬರು ಸಾವು, 6 ಮಂದಿ ಗಾಯ

ಇಬ್ಬರು ಸಹೋದರಿಯರು ನಾಪತ್ತೆ: ದೂರು ದಾಖಲು

 

ಇತ್ತೀಚಿನ ಸುದ್ದಿ