ಪ್ಯಾಂಟ್‌ ಜಿಪ್‌ ನಲ್ಲಿ ಚಿನ್ನ ಪತ್ತೆ: ಏರ್‌ ಕಸ್ಟಮ್ಸ್‌ ಅಧಿಕಾರಿಗಳ ಬಲೆಗೆ ಬಿದ್ದ ಪ್ರಯಾಣಿಕ - Mahanayaka
10:20 AM Thursday 21 - August 2025

ಪ್ಯಾಂಟ್‌ ಜಿಪ್‌ ನಲ್ಲಿ ಚಿನ್ನ ಪತ್ತೆ: ಏರ್‌ ಕಸ್ಟಮ್ಸ್‌ ಅಧಿಕಾರಿಗಳ ಬಲೆಗೆ ಬಿದ್ದ ಪ್ರಯಾಣಿಕ

gold
08/11/2023


Provided by

ಬೆಂಗಳೂರು: ಏರ್‌ ಕಸ್ಟಮ್ಸ್‌ ಅಧಿಕಾರಿಗಳು ಪ್ಯಾಂಟ್‌ ಜಿಪ್‌ ಲೈನ್‌ ನಲ್ಲಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಪ್ರಯಾಣಿಕ ಬೆಂಗಳೂರು ಏರ್‌ ಪೋರ್ಟ್‌ನಲ್ಲಿ  ವಶಕ್ಕೆ ಪಡೆದಿದ್ದಾರೆ.

ಶಾರ್ಜಾದಿಂದ ಬಂದಿದ್ದ ಪ್ರಯಾಣಿಕ ಪೇಸ್ಟ್‌ ರೂಪದಲ್ಲಿ ಚಿನ್ನ ಕಳ್ಳಸಾಗಣೆ  ಮಾಡುತ್ತಿದ್ದ. ಈತನನ್ನು ಏರ್‌ಪೋರ್ಟ್‌ನಲ್ಲಿ ಏರ್‌ ಕಸ್ಟಮ್ಸ್‌ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ  ಪ್ಯಾಂಟ್‌ ಜಿಪ್‌ ನಲ್ಲಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದಿದ್ದು ಪತ್ತೆಯಾಗಿದೆ.

ಚಿನ್ನದ ಜೊತೆ ಪ್ರಯಾಣಿಕ ಸಿಗರೇಟ್ ಸ್ಟಿಕ್ ಹಾಗೂ ಸೌಂದರ್ಯವರ್ಧಕ ಪಾಕೇಟ್ ಸಾಗಾಟ ಮಾಡುತ್ತಿದ್ದ. 3,300 ಸಿಗರೇಟ್ ಸ್ಟಿಕ್ ಮತ್ತು 324 ಸೌಂದರ್ಯವರ್ಧಕ ಪಾಕೇಟ್‌ಗಳನ್ನೂ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ

ಸುಮಾರು 18.57 ಲಕ್ಷ ರೂ. ಮೌಲ್ಯದ 284 ಗ್ರಾಂ ಚಿನ್ನವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಪ್ರಯಾಣಿಕನನ್ನ ವಶಕ್ಕೆ ಪಡೆದು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ