ಮಹಾ ಬೇಟೆ: ಚಿನ್ನ ಕಳ್ಳ ಸಾಗಾಣಿಕೆ ಪತ್ತೆ; 7.75 ಕೋಟಿ ಮೌಲ್ಯದ ಚಿನ್ನ ವಶ

ಅಹ್ಮದಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಹೋಟೆಲ್ ವೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಚಿನ್ನ ಕಳ್ಳಸಾಗಣೆ ಜಾಲವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ ಐ) ಅಧಿಕಾರಿಗಳು ಭೇದಿಸಿದ್ದು, ಭಾರೀ ಪ್ರಮಾಣದ ಅಮೂಲ್ಯ ಲೋಹವನ್ನು ವಶಪಡಿಸಿಕೊಂಡಿದ್ದಾರೆ.
ಈ ಕಾರ್ಯಾಚರಣೆಯ ಸಮಯದಲ್ಲಿ ಡಿಆರ್ ಐ 7.75 ಕೋಟಿ ರೂ.ಗಳ ಮೌಲ್ಯದ ಒಟ್ಟು 10.32 ಕೆಜಿ 24 ಕ್ಯಾರೆಟ್ ಚಿನ್ನವನ್ನು ವಶಪಡಿಸಿಕೊಂಡಿದೆ.
ಗುಪ್ತಚರ ಮಾಹಿತಿಯ ಆಧಾರದ ಮೇಲೆ, ಡಿಆರ್ ಐ ಅಧಿಕಾರಿಗಳು ಅಬುಧಾಬಿಯಿಂದ ಆಗಮಿಸಿದ ಇಬ್ಬರು ಪ್ರಯಾಣಿಕರನ್ನು ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಎಸ್ವಿಪಿಐ) ಪತ್ತೆ ಹಚ್ಚಲಾಯಿತು. ಅವರನ್ನು ಸ್ವಾಗತಿಸಲು ವಿಮಾನ ನಿಲ್ದಾಣದಲ್ಲಿ ಇತರ ಇಬ್ಬರು ವ್ಯಕ್ತಿಗಳನ್ನು ಪತ್ತೆಹಚ್ಚಲಾಯ್ತು.
ಅಹಮದಾಬಾದ್ ವಿಮಾನ ನಿಲ್ದಾಣ ಪ್ರದೇಶದ ಬಳಿಯ ಹೋಟೆಲ್ ಬಳಿ ಡಿಆರ್ ಐ ಅಧಿಕಾರಿಗಳು ಪ್ರಯಾಣಿಕರು ಮತ್ತು ಸ್ವೀಕರಿಸುವವರನ್ನು ತಡೆದಿದ್ದಾರೆ.
ಪ್ರಯಾಣಿಕರನ್ನು ಪರಿಶೀಲನೆ ಮಾಡಿದಾಗ ಅವರ ಒಳ ಉಡುಪುಗಳಲ್ಲಿ ಅಡಗಿಸಿಟ್ಟಿದ್ದ 3596.36 ಗ್ರಾಂ ವಿದೇಶಿ ಮೂಲದ ಕಳ್ಳಸಾಗಣೆ ಚಿನ್ನದ ಪೇಸ್ಟ್ ಅನ್ನು ವಶಪಡಿಸಿಕೊಳ್ಳಲಾಯಿತು.
ಇನ್ನು ಡಿಆರ್ ಐ ಅಧಿಕಾರಿಗಳ ತಂಡವು ಸಿಂಡಿಕೇಟ್ ನ ಇತರ ಸದಸ್ಯರು ತಂಗಿದ್ದ ಹೋಟೆಲ್‌ನಲ್ಲಿ ಶೋಧ ಕಾರ್ಯಾಚರಣೆ ನಡೆಸಿತು.
ಸಿಂಡಿಕೇಟ್ ನ ಇನ್ನೊಬ್ಬ ಸದಸ್ಯನಿಂದ ಕಳ್ಳಸಾಗಣೆ ಮಾಡಿದ ಚಿನ್ನದ ಪೇಸ್ಟ್ ಅನ್ನು ಸ್ವೀಕರಿಸಿದ ನಂತರ ಒಬ್ಬ ವ್ಯಕ್ತಿ ಈಗಾಗಲೇ ಅಹಮದಾಬಾದ್ ನಿಂದ ಹೊರಟಿದ್ದಾನೆ ಎಂದು ಹೆಚ್ಚಿನ ವಿಚಾರಣೆಯಿಂದ ತಿಳಿದುಬಂದಿದೆ. ಅವರು ಮುಂಜಾನೆ ವಿಮಾನದಲ್ಲಿ ಮುಂಬೈಗೆ ಬಂದಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth