ಐದು ತಿಂಗಳಲ್ಲಿ ಸರ್ಕಾರ ಬಹಳ ದೊಡ್ಡ ಯಡವಟ್ಟು ಮಾಡ್ಕೊಂಡಿದೆ: ಚಿಕ್ಕಮಗಳೂರಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ
ಚಿಕ್ಕಮಗಳೂರು: ಸಿದ್ದರಾಮಯ್ಯ ಸರ್ಕಾರ ಅಂದ್ರೆ ಯಡವಟ್ಟು ಸರ್ಕಾರ ಅಂತ ಜನಕ್ಕೆ ಅನ್ನಿಸ್ತಿದೆ, ಯಾವ ಆಧಾರದಲ್ಲಿ ಎಲೆಕ್ಷನ್ ಗೆದ್ದಿದ್ರೋ ಅದಕ್ಕೆ ಉಲ್ಟಾ ಇದೆ, ಸರ್ಕಾರ ಹೊಸದಾಗಿ ಬಂದಿದ್ದು, ನಾಲ್ಕೈದು ತಿಂಗಳಾಗಿದೆ. ಐದು ತಿಂಗಳಲ್ಲಿ ಸರ್ಕಾರ ಬಹಳ ದೊಡ್ಡ ಯಡವಟ್ಟು ಮಾಡ್ಕೊಂಡಿದೆ ಎಂದು ಚಿಕ್ಕಮಗಳೂರಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದ ಕೂಪವಾಗಿದೆ. ಸರ್ಕಾರ ಸ್ವಜನ ಪಕ್ಷಪಾತದ ಉತ್ತುಂಗಕ್ಕೆ ಏರಿದೆ. ಕಾವೇರಿ ನೀರಿನ ವಿಚಾರದಲ್ಲಿ ಫೂರ್ತಿ ವಿಫಲವಾಗಿದೆ, ಕಾವೇರಿ ಪ್ರಾಧಿಕಾರ ಹಾಗೂ ಸುಪ್ರೀಂ ಕೋರ್ಟಿಗೆ ಸರಿಯಾದ ಮಾಹಿತಿ ಕೊಡಲಿಲ್ಲ. ಕಣ್ಣೊರೆಸಲು ಮೀಟಿಂಗ್ ಕರೆದು ಮೊದಲೇ ನಿತ್ಯ 15 ಸಾವಿರ ಕ್ಯೂಸೆಕ್ ನೀರು ಬಿಟ್ರು ಎಂದು ಶೋಭಾ ಆರೋಪಿಸಿದರು.
ಭಾಗ್ಯಗಳನ್ನ ಕೊಟ್ರು ಅರ್ಧ ಜನಕ್ಕಷ್ಟೆ ಭಾಗ್ಯ ಸಿಕ್ಕಿರೋದು. ದಿನಾಲೂ ಸರ್ವರ್ ಡೌನ್, ಫೆಲ್ಯೂರ್ ಅಂತ ನೆಪ ಹೇಳ್ತಿದ್ದಾರೆ. ಅವರದ್ದೇ ಶಾಸಕರಿಗೆ ಖುಷಿ ಇಲ್ಲ, ದಿನಕ್ಕೊಂದು ಹೇಳಿಕೆ ಕೊಡ್ತಿದ್ದಾರೆ. ನಾಲ್ಕೇ ತಿಂಗಳಿಗೆ ಅಧಿಕಾರಿಗಳು ಬೇಸತ್ತಿದ್ದಾರೆ, ಅವರಿಗೂ ಖುಷಿ ಇಲ್ಲ. ಇದು ಇಂದಿನ ಕಾಂಗ್ರೆಸ್ ಸರ್ಕಾರದ ಪರಿಸ್ಥಿತಿ. ಸಿಎಂ, ಡಿಸಿಎಂ, ಶಾಸಕರು, ಮಂತ್ರಿಗಳು ಏನು ಮಾಡ್ತಿದ್ದಾರೆ, ಜನ ಗಮನಿಸುತ್ತಿದ್ದಾರೆ ಎಂದು ಅವರು ಹೇಳಿದರು.




























