ಗೌಡರ ಕಣ್ಣಿನಲ್ಲಿ ಕಣ್ಣೀರು ಬತ್ತುವುದಿಲ್ಲ, ಕಾಂಗ್ರೆಸ್ ಗೆ ತಟ್ಟಿದೆ 3 ಶಾಪ | ಕಾಂಗ್ರೆಸ್ –ಜೆಡಿಎಸ್ ಬಗ್ಗೆ ನಳಿನ್ ಕುಮಾರ್ ಕಟೀಲ್ ಹೇಳಿದ್ದೇನು? - Mahanayaka
11:51 PM Tuesday 21 - October 2025

ಗೌಡರ ಕಣ್ಣಿನಲ್ಲಿ ಕಣ್ಣೀರು ಬತ್ತುವುದಿಲ್ಲ, ಕಾಂಗ್ರೆಸ್ ಗೆ ತಟ್ಟಿದೆ 3 ಶಾಪ | ಕಾಂಗ್ರೆಸ್ –ಜೆಡಿಎಸ್ ಬಗ್ಗೆ ನಳಿನ್ ಕುಮಾರ್ ಕಟೀಲ್ ಹೇಳಿದ್ದೇನು?

12/01/2021

ಹಾಸನ: ಯಾವ ಕೆರೆ ಬತ್ತಿದರೂ ಹಾಸನದ ಗೌಡರ ಕಣ್ಣಿನಲ್ಲಿ ನೀರು ಬತ್ತುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀ ಅವರು, ಜೆಡಿಎಸ್ ವರಿಷ್ಠ ದೇವೇಗೌಡ ಅವರನ್ನು ಲೇವಡಿ ಮಾಡಿದ್ದಾರೆ.

 ಹಾಸನದಲ್ಲಿ ನಡೆದ ಜನಸೇವಕ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇವೇಗೌಡರನ್ನು ಟೀಕಿಸಿ, ಕಾಲಕ್ಕೆ ತಕ್ಕಂತೆ ಕಣ್ಣೀರು ಸುರಿಯುತ್ತದೆ.  ಕಣ್ಣೀರಿನಿಂದ ಜನರ ಮನಸ್ಸನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಜಿಲ್ಲೆಯ ಜನತೆ ಸಾಬೀತು ಮಾಡಿದ್ದಾರೆ ಎಂದು ಹೇಳಿದರು.

 ಇನ್ನು ಕಾಂಗ್ರೆಸ್​ಗೆ ಮೂರು ಶಾಪ ತಟ್ಟಿದೆ. ಮೊದಲನೆಯದ್ದು ಗಾಂಧಿ, ಎರಡನೇ ಶಾಪ ಅಂಬೇಡ್ಕರ್, ಮೂರನೇದು ಗೋ ಶಾಪ. ಆದ್ದರಿಂದ ಆರು ದಶಕಗಳ ಕಾಲ ದೇಶವನ್ನಾಳಿದ್ದ ಕಾಂಗ್ರೆಸ್ ಇಂದು ಅವನತ್ತಿಯತ್ತ ಸಾಗಿದೆ ಎಂದು ಹೇಳಿದರು.

ಸ್ವತಂತ್ರ ಬಂದ ನಂತರ ಗಾಂಧಿ ಚಿಂತನೆಯನ್ನ ಕಾಂಗ್ರೆಸ್​ ಉಳಿಸಲಿಲ್ಲ. ಗಾಂಧಿ ವಿಚಾರವನ್ನು ಕೈ ಬಿಟ್ಟಿದೆ. ಇನ್ನು ಅಂಬೇಡ್ಕರ್ ಅವರನ್ನು ಎರಡು ಬಾರಿ ಸೋಲಿಸಿದ್ದು ಇದೇ ಕಾಂಗ್ರೆಸ್. ಅಂಬೇಡ್ಕರ್​ ರ ಶವ ಸಂಸ್ಕಾರಕ್ಕೂ ಕಾಂಗ್ರೆಸ್ ದೆಹಲಿಯಲ್ಲಿ ಅವಕಾಶ ನೀಡಲಿಲ್ಲ. ಕಾಂಗ್ರೆಸ್ ಪ್ರಥಮ ಚಿಹ್ನೆ ಆಕಳು ಮತ್ತು ಗೋವು. ಆದ್ರೆ ನಂತರದ ದಿನದಲ್ಲಿ ಕಾಂಗ್ರೆಸ್ ಗೋಹತ್ಯೆಗೆ ಪ್ರೋತ್ಸಾಹ ನೀಡಿತು. ಈ ಮೂರೂ ಶಾಪಗಳು ಇದೀಗ ಕಾಂಗ್ರೆಸ್​ಗೆ ತಟ್ಟಿದೆ ಎಂದರು.

ಇತ್ತೀಚಿನ ಸುದ್ದಿ