ಗೌರಿ ಲಂಕೇಶ್, ಎಂ.ಎಂ.ಕಲಬುರ್ಗಿ ಜೊತೆಗೆ ನಿನ್ನನ್ನೂ ಕಳಿಸ್ತೇವೆ | ಕೆ.ಎಸ್.ಭಗವಾನ್ ಗೆ ವಕೀಲೆ ಬೆದರಿಕೆ - Mahanayaka
5:17 AM Thursday 16 - October 2025

ಗೌರಿ ಲಂಕೇಶ್, ಎಂ.ಎಂ.ಕಲಬುರ್ಗಿ ಜೊತೆಗೆ ನಿನ್ನನ್ನೂ ಕಳಿಸ್ತೇವೆ | ಕೆ.ಎಸ್.ಭಗವಾನ್ ಗೆ ವಕೀಲೆ ಬೆದರಿಕೆ

07/02/2021

ಬೆಂಗಳೂರು: ಸಾಹಿತಿ ಕೆ.ಎಸ್.ಭಗವಾನ್ ಮುಖಕ್ಕೆ ಮಸಿ ಬಳಿದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ಮೇಲೆ ಕೇಸ್ ದಾಖಲಾಗಿದ್ದು, ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.


Provided by

ಭಗವಾನ್ ಮುಖಕ್ಕೆ ಮಸಿ ಬಳಿದ ಮೀರಾ ಮತ್ತು ಅವರ ಪತಿ ರಾಘವೇಂದ್ರ ವಿರುದ್ಧ ಮೊಕದ್ದಮೆ ದಾಖಲಾಗಿದೆ. ಮಸಿ ಬಳಿದ ಸಂದರ್ಭದಲ್ಲಿ  ಭಗವಾನ್ ಅವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಭಗವಾನ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ನೀನು ಮೈಸೂರಿಗೆ ಹೋಗುವಷ್ಟರಲ್ಲಿ ನಮ್ಮ ಹುಡುಗರು ನಿನ್ನನ್ನು ಕೊಲ್ಲುತ್ತಾರೆ. ಗೌರಿ ಲಂಕೇಶ್, ಎಂ.ಎಂ.ಕಲಬುರ್ಗಿ ಜೊತೆಗೆ ನಿನ್ನನ್ನೂ ಕಳಿಸ್ತೇವೆ ಎಂದು ವಕೀಲೆ ಭಗವಾನ್ ಅವರಿಗೆ ಕೊಲೆ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇನ್ನೂ ಘಟನೆ ಸಂಬಂಧ  ಐಪಿಸಿ ಸೆಕ್ಷನ್ 506, 341, 34 ಹಾಗೂ 504ರಡಿಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೂ ವಕೀಲೆಯಾಗಿದ್ದುಕೊಂಡು ಮೀರಾ ಅವರು ಇಂತಹ ಕೆಲಸಕ್ಕೆ ಕೈ ಹಾಕಬಾರದಿತ್ತು. ಕಾನೂನಿನ ಮೂಲಕವೇ ಭಗವಾನ್ ವಿರುದ್ಧ ಹೋರಾಡಬಹುದಿತ್ತು ಎನ್ನುವ ಅಭಿಪ್ರಾಯಗಳು ಸಾರ್ವಜನಿಕವಾಗಿ ಕೇಳಿ ಬಂದಿದೆ. ನ್ಯಾಯಾಲಯದ ಆವರಣದಲ್ಲಿ ವಕೀಲೆ ಇಂತಹ ವರ್ತನೆ ತೋರಿರುವುದು ಸಮಾಜಕ್ಕೆ ಕೆಟ್ಟ ಸಂದೇಶವನ್ನು ನೀಡಿದಂತಾಗಿದೆ ಎಂಬ ಅಭಿಪ್ರಾಯ ಕೇಳಿ ಬಂದಿದೆ.

ಮಹಾನಾಯಕ ಡಾಟ್ ಇನ್ | ವಾಟ್ಸಾಪ್: 6363101317

ಇತ್ತೀಚಿನ ಸುದ್ದಿ