ಪ್ರಧಾನಿ‌ ಮೋದಿಗೆ ‘ಗ್ರ್ಯಾಂಡ್‌ ಕ್ರಾಸ್‌ ಆಫ್‌ ದಿ ಆರ್ಡರ್‌ ಆಫ್‌ ಆನರ್‌ ಪ್ರಶಸ್ತಿ' ಪ್ರದಾನ - Mahanayaka
7:54 AM Thursday 23 - October 2025

ಪ್ರಧಾನಿ‌ ಮೋದಿಗೆ ‘ಗ್ರ್ಯಾಂಡ್‌ ಕ್ರಾಸ್‌ ಆಫ್‌ ದಿ ಆರ್ಡರ್‌ ಆಫ್‌ ಆನರ್‌ ಪ್ರಶಸ್ತಿ’ ಪ್ರದಾನ

26/08/2023

ಗ್ರೀಸ್‌ ದೇಶದ ಪ್ರತಿಷ್ಠಿತ ‘ಗ್ರ್ಯಾಂಡ್‌ ಕ್ರಾಸ್‌ ಆಫ್‌ ದಿ ಆರ್ಡರ್‌ ಆಫ್‌ ಆನರ್‌ ಪ್ರಶಸ್ತಿ’ಯನ್ನು ಗ್ರೀಸ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿ ಗೌರವಿಸಲಾಗಿದೆ.

40 ವರ್ಷಗಳ ಅನಂತರ ಗ್ರೀಸ್‌ಗೆ ಭೇಟಿ ನೀಡಿರುವ ಭಾರತದ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗ್ರೀಸ್‌ ಅಧ್ಯಕ್ಷೆ ಕ್ಯಾಥರಿನಾ ಸಕೆಲ್ಲರೊಪೌಲೌ ಅವರು ಈ ಪ್ರಶಸ್ತಿ ನೀಡಿ ಗೌರವಿಸಿದರು.

ಈ ಬಗ್ಗೆ ಟ್ವೀಟ್‌ ಮಾಡಿ ಸಂತಸ ಹಂಚಿಕೊಂಡಿರುವ ಪ್ರಧಾನಿ ಮೋದಿ ಅವರು, ‘ಗ್ರ್ಯಾಂಡ್‌ ಕ್ರಾಸ್‌ ಆಫ್‌ ದಿ ಆರ್ಡರ್‌ ಆಫ್‌ ಆನರ್‌ ಪ್ರಶಸ್ತಿ ನೀಡಿದ್ದಕ್ಕಾಗಿ ನಾನು ಗ್ರೀಸ್ ಸರ್ಕಾರ, ಅಧ್ಯಕ್ಷೆ ಕ್ಯಾಥರಿನಾ ಸಕೆಲ್ಲರೊಪೌಲೌ ಮತ್ತು ಗ್ರೀಸ್‌ನ ಜನರಿಗೆ ಧನ್ಯವಾದ ತಿಳಿಸುತ್ತೇನೆ. ಇದು ಗ್ರೀಸ್‌ನ ಜನರು ಭಾರತದ ಬಗ್ಗೆ ಹೊಂದಿರುವ ಗೌರವವನ್ನು ತೋರಿಸುತ್ತದೆ’ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಸುದ್ದಿ