ಗೃಹ ಲಕ್ಷ್ಮೀ ಯೋಜನೆಯ ಹಣ ಬರುತ್ತಿಲ್ಲವೇ?: ಹಾಗಿದ್ರೆ ಈ ಕೆಲಸ ಮೊದಲು ಮಾಡಿ

ಬೆಂಗಳೂರು: ಗೃಹ ಲಕ್ಷ್ಮೀ ಯೋಜನೆಗೆ ನೋಂದಾಯಿಸಿಕೊಂಡು, ಕೆಲ ಯಜಮಾನಿ ಮಹಿಳೆಯರಿಗೆ ಹಣ ಬಾರದೇ ಇರುವ ಬಗ್ಗೆ ದೂರುಗಳು ಬರುತ್ತಿವೆ.
ಈ ಸಮಸ್ಯೆ ನಿವಾರಣೆಗಾಗಿ ಯಜಮಾನಿಯರು ಕೆಲ ತಾಂತ್ರಿಕ ಸಮಸ್ಯೆ ನಿವಾರಿಸಿಕೊಳ್ಳುವಂತೆ ಸರ್ಕಾರ ತಿಳಿಸಿದೆ.
ಸರ್ಕಾರದ ಗೃಹ ಲಕ್ಷ್ಮೀ ಯೋಜನೆ ರೂ.2000 ಹಣ ಬಾರದ ಮಹಿಳೆಯರು, ತಪ್ಪದೇ ಕೆವೈಸಿ ಮಾಡಿಸುವಂತೆ ತಿಳಿಸಿದೆ. ಅಲ್ಲದೇ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಲಿಂಕ್ ಮಾಡಬೇಕು. ರೇಷನ್ ಕಾರ್ಡ್ ನಲ್ಲಿರೋ ಪ್ರತಿಯೊಬ್ಬ ಸದಸ್ಯರ ಕೆವೈಸಿ ಅಪ್ ಡೇಟ್ ಆಗಿರಬೇಕು.
ಇನ್ನೂ ರೇಷನ್ ಕಾರ್ಡ್ ಸದಸ್ಯರು ಬ್ಯಾಂಕ್ ಗಳಿಗೆ ತೆರಳಿ ತಮ್ಮ ಆಧಾರ್ ಸಂಖ್ಯೆ ನೀಡಿ, ಕೈವೈಸಿ ಅಪ್ ಡೇಟ್ ಮಾಡಿಸಬೇಕು. ಗೃಹ ಲಕ್ಷ್ಮೀ ಯೋಜನೆಯ ಫಲಾನುಭವಿಗಳು NPCI ಮಾಡಿಸೋದು ಕಡ್ಡಾಯವಾಗಿದೆ. ಬ್ಯಾಂಕ್ ಖಾತೆಯಲ್ಲಿನ ಹೆಸರು, ಆಧಾರ್ ಕಾರ್ಡ್ ನಲ್ಲಿನ ಹೆಸರು ಒಂದೇ ಆಗಿದ್ಯಾ ಅಂತ ಚೆಕ್ ಮಾಡಿ. ತಪ್ಪಿದ್ದರೇ ಸರಿ ಪಡಿಸಿಕೊಳ್ಳುವಂತೆ ತಿಳಿಸಿದೆ.
ಈ ಎಲ್ಲಾ ತಾಂತ್ರಿಕ ಸಮಸ್ಯೆಯನ್ನು ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಾದಂತ ಯಜಮಾನಿ ಮಹಿಳೆಯರು ಮಾಡಿಕೊಂಡಿದ್ದೇ ಆದಲ್ಲಿ, ಪ್ರತಿ ತಿಂಗಳು ರೂ.2000 ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ ಅಂತ ರಾಜ್ಯ ಸರ್ಕಾರ ಮಾಹಿತಿ ನೀಡಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97