ಸದ್ದಿಲ್ಲದೇ ಸಮಾಜ ಸೇವೆಯಲ್ಲಿ ತೊಡಗಿದ “ಗಬ್ಗಲ್ ಯುವ ಗೆಳೆಯರ ಬಳಗ”
ಕೊಟ್ಟಿಗೆಹಾರ : ಮಲೆನಾಡಿನಲ್ಲಿ ಅನೇಕ ಸಮಾಜ ಸೇವಕರು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಗುರುತಿಸಿಕೊಳ್ಳುತ್ತಿದ್ದಾರೆ.
ಕೆಲವರು ಸದ್ದಿಲ್ಲದೇ ಸಮಾಜ ಸೇವೆ ಮಾಡಿ ತೃಪ್ತಿ ಪಡುತ್ತಾರೆ ಅಂತವರ ಹಾದಿಯಲ್ಲಿ ವರುಷದ ಹಿಂದೆ ಸಮಾಜ ಸೇವೆಗಾಗಿಯೇ ತೊಡಗಿಸಿಕೊಂಡು ತೆರೆಮರೆಯಲ್ಲಿಯೇ ಸಮಾಜ ಸೇವೆಯಲ್ಲಿ ನಿರತರಾಗಿರುವ ಗಬ್ಗಲ್ ಯುವ ಗೆಳೆಯರ ಬಳಗವೂ ಒಂದು.
ತೆರೆಮರೆಯಲ್ಲಿಯೇ ಸಮಾಜ ಸೇವೆಗಳನ್ನು ಮಾಡುತ್ತಾ ಮನೆಗಳನ್ನು ದುರಸ್ತಿ ಮಾಡುತ್ತಾ ಬಂದಿದೆ.ಈ ಯುವ ಗೆಳೆಯರ ಬಳಗವು ಯಾವುದೇ ಪ್ರತಿಫೇಕ್ಷೆ ಅಪೇಕ್ಷಿಸದೇ ಮನೆ ಹಾನಿಯಾದವರಿಗೆ ಮನೆ ನಿರ್ಮಾಣ ಕಾರ್ಯ,ಸರ್ಕಾರಿ ಶಾಲೆಗೆ ಉಳಿವಿಗಾಗಿ ಸೇವಾ ಕಾರ್ಯ ಮಾಡುತ್ತಾ ಬರುತ್ತಿದೆ.
ಗ್ರಾಮಗಳಲ್ಲಿ ಸ್ವಚ್ಚತಾ ಕಾರ್ಯಕ್ಕೂ ತಾವು ಮುಂದಾಗಿದ್ದು, ಬಳಗವು ಸೇವೆಯನ್ನು ನೀಡುತ್ತಿದೆ. ಕೂವೆ ಗ್ರಾಮದ ವ್ಯಾಪ್ತಿಯ ತಲಗೂರು ಗ್ರಾಮದ ರಾಮ ಅವರ ಮನೆ ಸಂಪೂರ್ಣ ದುರಸ್ತಿ ಮಾಡಿದೆ. ರಿಪೇರಿಗೆ ಇತರರ ಸಹಾಯ ಕೇಳದೇ ಬಳಗವೇ ಖರ್ಚು ಮಾಡಿ ಸೇವೆ ನೀಡಿದೆ.
ಈ ಯುವ ಗೆಳೆಯರ ಬಳಗದಲ್ಲಿ 35 ಜನರು ಇದ್ದು ಬಳಗದ ಅಧ್ಯಕ್ಷರಾಗಿ ಮಂಜುನಾಥ್ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ.ಕಾರ್ಯದರ್ಶಿಗಳಾಗಿ ಯತೀಶ್,ಸುಭಾಷ್,ಮೋಹನ್,ರಂಜಿತ್,ಖಜಾಂಚಿಗಳಾಗಿ ಅರುಣ್,ಕಿರಣ್,ಅಶೋಕ್,ಅವಿನಾಶ್,ಸಂಚಾಲಕರಾಗಿ ಸತೀಶ್,ಗಣೇಶ್, ಸುದರ್ಶನ್,ಪ್ರದೀಪ್,ರಘು, ಮಂಜು ಅವರ ತಂಡ ಸಮಾಜ ಸೇವೆಗಾಗಿ ರಚನೆಯಾಗಿದೆ .
ಸಮಾಜ ಸೇವೆಗಾಗಿ ಗಬ್ಗಲ್ ಯುವ ಗೆಳೆಯರ ತಂಡ ಯಾವುದೇ ಸಂಕಷ್ಟದ ಸಮಯದಲ್ಲೂ ನೆರವಿಗೆ ಸನ್ನಧ್ಧವಾಗಿದೆ.ಗ್ರಾಮೀಣ ಪ್ರದೇಶದ ಯುವಕರು ಉದಾರ ಸೇವೆ ಮಾಡಲು ಮುಂದಾಗಿರುವುದು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw




























