ಗ್ಯಾರಂಟಿ ಯೋಜನೆ: ಆಧಾರ್ ತಿದ್ದುಪಡಿಗಾಗಿ ರಾತ್ರಿಯೇ ಬಂದು ಮಲಗಿದ ಜನರು

ಚಾಮರಾಜನಗರ: ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಆಧಾರ್ ತಿದ್ದುಪಡಿ ಮಾಡಿಸಲು ಜನಜಾತ್ರೆ ಸೇರುತ್ತಿರುವ ಹಿನ್ನೆಲೆಯಲ್ಲಿ ರಾತ್ರಿಯೇ ಬಂದು ಸೇವಾಕೇಂದ್ರ ಮುಂದೆ ಜನರು ಮಲಗಿದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ತಾಲೂಕು ಕಚೇರಿಯಲ್ಲಿ ನಡೆದಿದೆ.
ಕಳೆದ ಮೂರು ದಿನಗಳಿಂದಲೂ ನಿತ್ಯ ಸೇವಾಕೇಂದ್ರಕ್ಕೆ ಬಂದರೂ ಟೋಕನ್ ಸಿಗದ ಹಿನ್ನೆಲೆಯಲ್ಲಿ ಬೇಸತ್ತ ಹಲವರು ತಾಲೂಕು ಕಚೇರಿಗೆ ಬುಧವಾರ ರಾತ್ರಿಯೇ ಬಂದು ಮಲಗಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಬೇರಂಬಾಡಿ ಗ್ರಾಮದ ಚೆನ್ನಾಜಮ್ಮ, ಸಿದ್ದಮ್ಮ, ನೇನೆಕಟ್ಟೆ ಗ್ರಾಮದ ಮಾಲೇಗೌಡ, ಬೆಟ್ಟಗೌಡನಹುಂಡಿ ಗ್ರಾಮದ ಬೆಳ್ಳಿಬಸವೇಗೌಡ ಎಂಬವರು ಶಾಲು ಹೊದ್ದು ಬಂದು ಮಲಗಿದ್ದು ಟೋಕನ್ ಗಾಗಿ ಎಷ್ಟು ಪಡಿಪಾಟಲು ಪಡುವ ಪರಿಸ್ಥಿತಿ ಇದೆ ಎಂಬುದಕ್ಕೆ ನಿದರ್ಶನವಾಗಿದೆ.
ಗ್ಯಾರಂಟಿ ಯೋಜನೆಗೇ ಮಾಡಿಸಲೇ ಬೇಕು ಆಧಾರ್ ತಿದ್ದುಪಡಿ!!
ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್ ಗೆ ಫೊನ್ ನಂ, ಪಡಿತರ ಕಾರ್ಡ್ ಗಳಲ್ಲಿ ಯಜಮಾನಿ ಹೆಸರುಗಳನ್ನು ತಿದ್ದುಪಡಿ ಮಾಡಿಸಬೇಕಿದೆ.
ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಬ್ಯಾಂಕ್ ವಿವರ, ಮೊಬೈಲ್ ನಂ ಲಿಂಕ್ ಆಗಿರುವ ಆಧಾರ್ ಕಾರ್ಡ್ ಕಡ್ಡಾಯವಾಗಿರುವುದರಿಂದ ಸೇವಾಕೇಂದ್ರದ ಮುಂದೆ ನಿತ್ಯ ಜನಜಾತ್ರೆಯೇ ಬಂದು ಸೇರುತ್ತಿದ್ದು ಟೋಕನ್ ಸಿಗದ ಇವರುಗಳು ರಾತ್ರಿಯೇ ಬಂದು ಮಲಗಿದ್ದಾರೆ.
ನಮ್ಮ ಗ್ರಾಮದಿಂದ ಪಟ್ಟಣಕ್ಕೆ ಬೆಳ್ಳಂಬೆಳಗ್ಗೆ ಬಸ್ ಇಲ್ಲ. ಎಂಟು ಗಂಟೆ ನಂತರ ಬರುವ ಬಸ್ ನಲ್ಲಿ ಗುಂಡ್ಲುಪೇಟೆ ಗೆ ಆಗಮಿಸುವ ವೇಳೆಗೆ ಆಧಾರ್ ಸೇವಾ ಕೇಂದ್ರದ ಮುಂದೆ ನೂರಾರು ಮಂದಿ ಜಮಾಯಿಸಿ ಕ್ಯೂ ನಲ್ಲಿ ನಿಂತಿರುತ್ತಾರೆ. ನಾಲ್ಕು ದಿನದಿಂದ ನಾವು ಆಧಾರ್ ಗೆ ಮೊಬೈಲ್ ನಂಬರ್ ಲಿಂಕ್ ಮಾಡಿಸಲು ತಾಲೂಕು ಕಚೇರಿಗೆ ಅಲೆಯುತ್ತಿದ್ದರೂ ಪ್ರಯೋಜನವಾಗದ ಹಿನ್ನಲೆ ರಾತ್ರಿ ಇಲ್ಲಿಯೇ ಮಲಗುತ್ತಿದ್ದೆವೆ. ಬೆಳಗ್ಗೆ ಮೊದಲನೆಯವರಾಗಿ ನಿಂತು ಟೋಕನ್ ಪಡೆದುಕೊಂಡು ಆಧಾರ್ ಗೆ ಮೊಬೈಲ್ ನಂಬರ್ ಲಿಂಕ್ ಮಾಡಿಸುತ್ತೇವೆ ಎಂದು ಆಧಾರ್ ಸೇವಾ ಕೇಂದ್ರದ ಬಳಿ ಮಲಗಿದ್ದ ಮಹಿಳೆಯರು ಅಳಲು ತೋಡಿಕೊಂಡರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 7483551849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw