ಗುಡ್ಡ ಕುಸಿದು ಕೂಲಿ ಕಾರ್ಮಿಕ ಸಾವು ಪ್ರಕರಣ: ಮೇಲ್ವಿಚಾರಕನಿಗೆ ನ್ಯಾಯಾಂಗ ಬಂಧನ - Mahanayaka

ಗುಡ್ಡ ಕುಸಿದು ಕೂಲಿ ಕಾರ್ಮಿಕ ಸಾವು ಪ್ರಕರಣ: ಮೇಲ್ವಿಚಾರಕನಿಗೆ ನ್ಯಾಯಾಂಗ ಬಂಧನ

jail
15/01/2023


Provided by

ಮಂಗಳೂರು: ನಗರದ ಸುರತ್ಕಲ್‌ ನಲ್ಲಿ ಗುಡ್ಡ ಕುಸಿದು ಕೂಲಿ ಕಾರ್ಮಿಕನೊಬ್ಬ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಿರುವ ಇಬ್ಬರು ಮೇಲ್ವಿಚಾರಕರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮೋಹನ ವಿಷ್ಣು ನಾಯ್ಕ (44) ಮತ್ತು ನಾಗರಾಜ ನಾರಾಯಣ ನಾಯ್ಕ (44) ನ್ಯಾಯಾಂಗ ಬಂಧನದಲ್ಲಿರುವವರು. ಆಂಧ್ರ ಮೂಲದ ಗುತ್ತಿಗೆದಾರ ರಾಮಚಂದ್ರ ಚೇಳ್ಯಾರು ಗ್ರಾಮದ ರೈಲ್ವೆ ಸೇತುವೆ ಬಳಿ ತಡೆಗೋಡೆ ನಿರ್ಮಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದ್ದರು.

ಹಳಿ ದುರಸ್ತಿ ಕಾಮಗಾರಿ ನಡೆಯುತ್ತಿದ್ದಾಗ ಘಟನೆ ಸಂಭವಿಸಿತ್ತು. ರೈಲು ಹಠಾತ್ತನೆ ಬಂದಿದ್ದು, ಗುಡ್ಡದ ಮೇಲಿನ ಮಣ್ಣು ಕುಸಿದು ಸೇತುವೆಯ ಕೆಳಗೆ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಬಿದ್ದಿದೆ. ಘಟನೆಯಲ್ಲಿ ಕೂಲಿ ಕಾರ್ಮಿಕ ಓಬಲೇಶ್ವರ ಸಾವನ್ನಪ್ಪಿದರೆ, ಬಳ್ಳಾರಿಯ ಗೋವಿಂದಪ್ಪ ಗಂಭೀರ ಗಾಯಗೊಂಡಿದ್ದರು. ಸುಮಾರು ಆರೇಳು ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು.

ಮೇಲ್ನೋಟಕ್ಕೆ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ತಡೆಗೋಡೆ ನಿರ್ಮಾಣಕ್ಕೆ ಕಾರ್ಮಿಕರನ್ನು ಬಳಸಿಕೊಂಡಿರುವುದು ಗೊತ್ತಾಗಿದೆ. ಇನ್ನು ಕಾರ್ಮಿಕರು ಸುರಕ್ಷತಾ ಗೇರ್ ಇಲ್ಲದೆ ಕೆಲಸ ಮಾಡುತ್ತಿರುವುದು ಕಂಡು ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ