ಅಯೋಧ್ಯಾ ದೇವಾಲಯದ ಅರ್ಚಕರ ನಕಲಿ ಫೊಟೋ ಪೋಸ್ಟ್: ಗುಜರಾತ್ ನ ಕಾಂಗ್ರೆಸ್ ನಾಯಕನ ಬಂಧನ - Mahanayaka
11:14 PM Friday 19 - December 2025

ಅಯೋಧ್ಯಾ ದೇವಾಲಯದ ಅರ್ಚಕರ ನಕಲಿ ಫೊಟೋ ಪೋಸ್ಟ್: ಗುಜರಾತ್ ನ ಕಾಂಗ್ರೆಸ್ ನಾಯಕನ ಬಂಧನ

13/12/2023

ಅಯೋಧ್ಯೆಯ ರಾಮಮಂದಿರದ ಅರ್ಚಕರ ನಕಲಿ ಫೋಟೋ ಪೋಸ್ಟ್‌ ಮಾಡಿದ್ದ ವ್ಯಕ್ತಿಯನ್ನು ಗುಜರಾತ್‌ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಹಿತೇಂದ್ರ ಪಿಠಾಡಿಯಾ ಎಂದು ಗುರುತಿಸಲಾಗಿದೆ. ಹಿತೇಂದ್ರ ಪಿಠಾಡಿಯಾ ಕಾಂಗ್ರೆಸ್‌ ಪಕ್ಷದ ಪರಿಶಿಷ್ಟ ಜಾತಿ (ಎಸ್‌ಸಿ) ಸೆಲ್ ಅಧ್ಯಕ್ಷರಾಗಿದ್ದಾರೆ. ಇವರು ಅಯೋಧ್ಯೆ ದೇಗುಲದ ಅರ್ಚಕರೊಬ್ಬರ ನಕಲಿ ಫೋಟೋವನ್ನು ಪೋಸ್ಟ್ ಮಾಡಿದ್ದರು. ಈ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡ ಗುಜರಾತ್ ಸೈಬರ್ ಕ್ರೈಂ ಬ್ರ್ಯಾಂಚ್‌ ಅವರನ್ನು ಬಂಧಿಸಿದೆ.

ಪಿಠಾಡಿಯ ವಿರುದ್ಧ ಸೆಕ್ಷನ್ 469 (ಪ್ರತಿಷ್ಠೆಗೆ ಧಕ್ಕೆ ತರುವ ಉದ್ದೇಶದಿಂದ ನಕಲು), ಸೆಕ್ಷನ್ 295 ಎ (ಯಾವುದೇ ವರ್ಗದ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು) ಮತ್ತು ಐಪಿಸಿಯ ಐಟಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ಸುದ್ದಿ