ಪ್ರವಾಹಕ್ಕೆ ಕೊಚ್ಚಿ ಹೋದ ಗುಜರಾತ್: 29 ಮಂದಿ ಸಾವು 17,800 ಜನರ ಸ್ಥಳಾಂತರ - Mahanayaka
7:08 PM Friday 12 - September 2025

ಪ್ರವಾಹಕ್ಕೆ ಕೊಚ್ಚಿ ಹೋದ ಗುಜರಾತ್: 29 ಮಂದಿ ಸಾವು 17,800 ಜನರ ಸ್ಥಳಾಂತರ

29/08/2024

ಕಳೆದ ಕೆಲವು ದಿನಗಳಿಂದ ಗುಜರಾತ್ ನಲ್ಲಿ ಭಾರೀ ಮಳೆಯಾಗುತ್ತಿದೆ. ಕಳೆದ ಮೂರು ದಿನಗಳಲ್ಲಿ 29 ಜನರು ಸಾವನ್ನಪ್ಪಿದ್ದಾರೆ. ಆದರೆ ಸತತ ನಾಲ್ಕನೇ ದಿನವೂ ರಾಜ್ಯದಲ್ಲಿ ಭಾರಿ ಮಳೆ ಮುಂದುವರಿದಿದ್ದರಿಂದ ಸುಮಾರು 17,800 ಜನರನ್ನು ಪ್ರವಾಹ ಪೀಡಿತ ಪ್ರದೇಶಗಳಿಂದ ಸ್ಥಳಾಂತರಿಸಲಾಗಿದೆ. ಮೊರ್ಬಿ ಜಿಲ್ಲೆಯ ಹಲ್ವಾಡ್ ತಾಲ್ಲೂಕಿನ ಧವಾನಾ ಗ್ರಾಮದ ಬಳಿ ಭಾನುವಾರ ಉಕ್ಕಿ ಹರಿಯುವ ಸೇತುವೆಯನ್ನು ದಾಟುವಾಗ ಟ್ರ್ಯಾಕ್ಟರ್ ಟ್ರಾಲಿ ಕೊಚ್ಚಿಹೋದ ನಂತರ ಕಾಣೆಯಾದವರಲ್ಲಿ ಏಳು ಜನರು ಸೇರಿದ್ದಾರೆ.


Provided by

ಮಳೆಯ ತಾತ್ಕಾಲಿಕವಾಗಿ ನಿಂತರೂ ನಗರದ ಮೂಲಕ ಹರಿಯುವ ವಿಶ್ವಾಮಿತ್ರಿ ನದಿ ನೀರು ಉಕ್ಕಿ ಹರಿದ ಪರಿಣಾಮ ಮನೆಗಳಿಗೆ ನೆರೆ ನುಗ್ಗಿದೆ. ಕಟ್ಟಡಗಳು, ರಸ್ತೆಗಳು ಮತ್ತು ವಾಹನಗಳು ಪ್ರವಾಹಕ್ಕೆ ಸಿಲುಕಿದೆ.

ಗುಜರಾತ್ ನ ಅನೇಕ ಭಾಗಗಳಲ್ಲಿ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು‌ಈ ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿ ಪರಿಸ್ಥಿತಿಯನ್ನು ಅರಿತರು. ನೈಸರ್ಗಿಕ ವಿಪತ್ತನ್ನು ನಿಭಾಯಿಸಲು ರಾಜ್ಯಕ್ಕೆ ಕೇಂದ್ರದ ಬೆಂಬಲದ ಭರವಸೆ ನೀಡಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ