ಭೀಕರ ಕಾರು ಅಪಘಾತ: ಆಕ್ಸಿಡೆಂಟ್ ನೋಡಲು ಗುಂಪು ಸೇರಿದ್ದ ಜನರಿಗೆ ಡಿಕ್ಕಿ ಹೊಡೆದ ಇನ್ನೊಂದು ಕಾರು; 9 ಮಂದಿ ಸಾವು - Mahanayaka

ಭೀಕರ ಕಾರು ಅಪಘಾತ: ಆಕ್ಸಿಡೆಂಟ್ ನೋಡಲು ಗುಂಪು ಸೇರಿದ್ದ ಜನರಿಗೆ ಡಿಕ್ಕಿ ಹೊಡೆದ ಇನ್ನೊಂದು ಕಾರು; 9 ಮಂದಿ ಸಾವು

20/07/2023


Provided by

ಗುಜರಾತ್ ನ ಅಹಮದಾಬಾದ್​​​​​​ನ ಸರ್ಖೇಜ್-ಗಾಂಧಿನಗರ (ಎಸ್‌ಜಿ) ಹೆದ್ದಾರಿಯಲ್ಲಿನ ಇಸ್ಕಾನ್ ಸೇತುವೆ ಮೇಲೆ ಭೀಕರ ಅಪಘಾತ ನಡೆದಿದೆ. ಈ ಘಟನೆಯಲ್ಲಿ ಒಟ್ಟು 9 ಜನ ಮೃತಪಟ್ಟಿದ್ದಾರೆ.

ತಡರಾತ್ರಿ 1:30 ಗಂಟೆಗೆ ಟ್ರಕ್​ ಹಾಗೂ ಎಸ್​ ಯುವಿ ಕಾರಿನ ನಡುವೆ ಸಂಭವಿಸಿದ್ದ ಅಪಘಾತವನ್ನು ನೋಡಲು ಸೇರಿದ್ದ ಜನರ ಮೇಲೆ ಇನ್ನೊಂದು ಕಾರು ವೇಗವಾಗಿ ಬಂದು ಗುದ್ದಿದೆ. ಈ ದುರ್ಘಟನೆಯಲ್ಲಿ ಇಬ್ಬರು ಪೊಲೀಸರು, ವಿದ್ಯಾರ್ಥಿಗಳು ಸೇರಿದಂತೆ ಸಾವನ್ನಪ್ಪಿದ್ದಾರೆ. ಸ್ಥಳದಲ್ಲೇ 6 ಜನ ಮೃತಪಟ್ಟಿದ್ರೆ, ಪೊಲೀಸರು ಸೇರಿ ಮೂವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಇನ್ನು ಈ ಘಟನೆಯಲ್ಲಿ 13 ಜನರಿಗೆ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿ ಕಾರು ಚಾಲಕನಿಗೂ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅಪಘಾತದ ವೇಳೆ ಮೃತಪಟ್ಟವರಲ್ಲಿ ಹೆಚ್ಚಿನವರು ಕಾಲೇಜ್​ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ.

ಬೋಟಾಡ್, ಭಾವನಗರದಿಂದ ಅಹಮದಾಬಾದ್‌ಗೆ ಓದಲು ಬಂದಿದ್ದರು.
ಎಸ್‌ಯುವಿ ಕಾರು ಹಾಗೂ ಟ್ರಕ್ ನಡುವೆ ಅಪಘಾತ ಸಂಭವಿಸಿದ್ದು, ಇದನ್ನು ನೋಡಲು ನಿಂತಿದ್ದ ಜನರ ಮೇಲೆ ವೇಗವಾಗಿ ಬಂದ ಜಾಗ್ವರ್​ ಕಾರು ಹರಿದಿದೆ.

ರಾಜ್‌ ಪಥ್ ಕ್ಲಬ್ ಪ್ರದೇಶದಿಂದ ವೇಗವಾಗಿ ಬಂದ ಕಾರು, ಜನಸಂದಣಿ ಮೇಲೆ ನುಗ್ಗಿದೆ. ಕಾರು ವೇಗವಾಗಿ ಬಂದು ಗುದ್ದಿದ ರಭಸಕ್ಕೆ ಅನೇಕ ಜನರು ಘಟನಾ ಸ್ಥಳದಿಂದ ಸುಮಾರು 20 ರಿಂದ 25 ಅಡಿ ದೂರ ಹಾರಿ ಹೋಗಿ ಬಿದ್ದಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ