200 ಅಂಕಗಳಲ್ಲಿ 211, 212 ಅಂಕ ಪಡೆದು ದಾಖಲೆ ಬರೆದ ಗುಜರಾತ್ ನ ವಿದ್ಯಾರ್ಥಿನಿ! - Mahanayaka

200 ಅಂಕಗಳಲ್ಲಿ 211, 212 ಅಂಕ ಪಡೆದು ದಾಖಲೆ ಬರೆದ ಗುಜರಾತ್ ನ ವಿದ್ಯಾರ್ಥಿನಿ!

gujarat student
07/05/2024


Provided by

ಅಹಮದಾಬಾದ್:   ಅಚ್ಚರಿಯ ಘಟನೆಯೊಂದರಲ್ಲಿ ಗುಜರಾತ್ ನ ಝಲೋದ್ ತಾಲೂಕಿನ ಖರಸಾನಾ ಗ್ರಾಮದ ವಿದ್ಯಾರ್ಥಿನಿಯೊಬ್ಬಳು 200 ಅಂಕಗಳಿಗೆ ನಡೆದ ಪರೀಕ್ಷೆಯಲ್ಲಿ ಎರಡು ವಿಷಯದಲ್ಲಿ  211 ಮತ್ತು 212 ಅಂಕಗಳನ್ನು ಗಳಿಸಿದ ಘಟನೆ ನಡೆದಿದೆ.

ವಂಶಿಬೆನ್ ಮನೀಶ್‌ ಭಾಯ್ ಎಂಬ ನಾಲ್ಕನೇ ತರಗತಿ ವಿದ್ಯಾರ್ಥಿನಿ ಗುಜರಾತಿ ಮತ್ತು ಗಣಿತದಲ್ಲಿ ಕ್ರಮವಾಗಿ 211 ಮತ್ತು 212 ಅಂಕಗಳನ್ನು ಗಳಿಸಿದ್ದಾಳೆ. ಆದರೆ ಒಟ್ಟು ಅಂಕ 200 ನಿಗದಿಯಾಗಿರುವಾಗ ಪರೀಕ್ಷೆಗೆ ನಿಗದಿ ಪಡಿಸಿದ್ದಕ್ಕಿಂತಲೂ ಹೆಚ್ಚಿನ ಅಂಕ ನೀಡಲಾಗಿದ್ದು, ವಿವಾದಕ್ಕೆ ಕಾರಣವಾಯಿತು.

ಈ ಘಟನೆ ಗುಜರಾತ್ ರಾಜ್ಯದ ಶಿಕ್ಷಣ ವ್ಯವಸ್ಥೆಯ ಗುಣಮಟ್ಟವನ್ನೇ ಪ್ರಶ್ನಿಸುವಂತಾಗಿದ್ದು,  ಗುಜರಾತ್ ನ ಶಿಕ್ಷಣ ವ್ಯವಸ್ಥೆಯ ದುಸ್ಥಿತಿಯ ಬಗ್ಗೆ ಕಳವಳ ವ್ಯಕ್ತವಾಗಿದೆ.

ಫಲಿತಾಂಶದ ಸಂಕಲನದ ವೇಳೆ ದೋಷ ಸಂಭವಿಸಿದೆ ಎಂದು ಸದ್ಯ ಶಿಕ್ಷಣ ಇಲಾಖೆ ತಿಳಿಸಿದ್ದು, ಬಳಿಕ ಪರಿಷ್ಕೃತಪಟ್ಟಿಯನ್ನು ಬಿಡುಗಡೆಗೊಳಿಸಲಾಯಿತು. ಈ ಪಟ್ಟಿಯಲ್ಲಿ ವಿದ್ಯಾರ್ಥಿನಿಗೆ ಗುಜರಾತಿಯಲ್ಲಿ 200 ರಲ್ಲಿ 191 ಅಂಕಗಳನ್ನು ಮತ್ತು ಗಣಿತದಲ್ಲಿ 200 ರಲ್ಲಿ 190 ಅಂಕಗಳನ್ನು ನೀಡಿ ವಿವಾತಕ್ಕೆ ತೇಪೆ ಹಾಕಲಾಗಿದೆ.

ವಿದ್ಯಾರ್ಥಿನಿಯ ಅಂಕಪಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.  ಅಲ್ಲದೇ 200ರಲ್ಲಿ  211, 212 ಅಂಕಗಳು ‘ಗುಜರಾತ್ ಮಾಡೆಲ್’ ಎಂದು ವ್ಯಾಪಕ ಟ್ರೋಲ್ ಆಗುತ್ತಿವೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ