ಗೂಳಿ ಕಾಳಗದ ವೇಳೆ  ನಾಲ್ವರು ಸಾವು: ಕನಿಷ್ಠ 300 ಮಂದಿ ಗಾಯ - Mahanayaka
7:00 PM Saturday 18 - October 2025

ಗೂಳಿ ಕಾಳಗದ ವೇಳೆ  ನಾಲ್ವರು ಸಾವು: ಕನಿಷ್ಠ 300 ಮಂದಿ ಗಾಯ

gulikalaga
29/06/2022

ಕೊಲಂಬಿಯಾ: ಗೂಳಿ ಕಾಳಗದ ವೇಳೆ ಸ್ಟ್ಯಾಂಡ್ ಕುಸಿದು ನಾಲ್ವರು ಸಾವನ್ನಪ್ಪಿದ್ದು,  ಹಲವಾರು ಮಂದಿ ಗಾಯಗೊಂಡ ಘಟನೆ ಕೊಲಂಬಿಯಾದಲ್ಲಿ ನಡೆದಿದೆ.


Provided by

300 ಕ್ಕೂ ಹೆಚ್ಚು ಜನರು ಘಟನೆಯಲ್ಲಿ ಗಾಯಗೊಂಡಿದ್ದಾರೆ. ಟೋಲಿಮಾ ಡಿಪಾರ್ಟ್‌ಮೆಂಟ್‌ ನ ಎಲ್’ಎಸ್ಪಿನಾಲ್‌ ನಲ್ಲಿರುವ ಕ್ರೀಡಾಂಗಣದಲ್ಲಿ ಪ್ರೇಕ್ಷಕರಿಂದ ತುಂಬಿದ ಮೂರು ಅಂತಸ್ತಿನ ಮರದ ಸ್ಟ್ಯಾಂಡ್ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಈ ಅವಘಡ ಸಂಭವಿಸಿದೆ.

ಕ್ರೀಡಾಂಗಣದಲ್ಲಿ “ಕೊರಲೇಜ” ಎಂಬ ಸಾಂಪ್ರದಾಯಿಕ ಕಾರ್ಯಕ್ರಮ ನಡೆಯುತ್ತಿತ್ತು. ಘಟನೆಯಲ್ಲಿ ಹಲವು  ಮಂದಿ ಕಾಲ್ತುಳಿತಕ್ಕೆಸಿಲುಕಿ ಗಾಯಗಳಾಗಿದೆ. ಇದರ ಮದ್ಯೆ ಗೂಳಿಯೊಂದು ರಿಂಗ್‌ ನಲ್ಲಿ ಇನ್ನೂ ಓಡುತ್ತಿತ್ತು. ಮೃತರಲ್ಲಿ ಇಬ್ಬರು ಮಹಿಳೆಯರು, ಒಬ್ಬ ಪುರುಷ ಮತ್ತು ಮಗು ಸೇರಿದ್ದಾರೆ ಎಂದು ಟೊಲಿಮಾ ಗವರ್ನರ್ ಜೋಸ್ ರಿಕಾರ್ಡೊ ಒರೊಸ್ಕೊ ತಿಳಿಸಿದ್ದಾರೆ.

322 ಜನರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ ಮತ್ತು ಅವರಲ್ಲಿ ನಾಲ್ವರು ತೀವ್ರ ನಿಗಾ ಘಟಕದಲ್ಲಿದ್ದಾರೆ ಎಂದು ಪ್ರದೇಶದ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕೈಗಳನ್ನು ಕಟ್ಟಿಕೊಂಡು 780 ಮೀಟರ್ ಅಗಲದ ನದಿಯನ್ನು ಈಜಿ ದಾಟಿದ ವೃದ್ಧೆ!

ಹೀನಾಯ ಸೋಲಿನ ನಂತರ ಒಟಿಟಿಗೆ ಕಾಲಿಟ್ಟ ಅಕ್ಷಯ್ ಕುಮಾರ್ ನಟನೆಯ ‘ಸಾಮ್ರಾಟ್ ಪೃಥ್ವಿರಾಜ್’!

ಕೊನೆಯ ಕ್ಷಣದಲ್ಲೂ ಅಂಗಾಂಗ ದಾನಿಗಳು ಸಿಗಲಿಲ್ಲ: ಖ್ಯಾತ ನಟಿಯ ಪತಿ ನಿಧನ

ಬ್ರಾಹ್ಮಣರ ಬಗ್ಗೆ ಹಗುರವಾಗಿ ಮಾತನಾಡಿದರೆ ಹುಷಾರ್… | ಬ್ರಾಹ್ಮಣ ಮುಖಂಡರಿಂದ ಎಚ್ಚರಿಕೆ

ಕೆಜಿಎಫ್ ಹೆಸರಿನಲ್ಲಿ ಇಕ್ಕಟ್ಟಿಗೆ ಸಿಲುಕಿಸುವ ಪತ್ರಕರ್ತರ ಪ್ರಶ್ನೆಗೆ ಜಾಣತನದ ಉತ್ತರ ನೀಡಿದ ಕಿಚ್ಚ ಸುದೀಪ್!

 

ಇತ್ತೀಚಿನ ಸುದ್ದಿ