ಶೆಡ್ ನಲ್ಲಿ ಗನ್ ಮಿಸ್ ಫೈರ್: ವ್ಯಕ್ತಿಯ ದಾರುಣ ಅಂತ್ಯ

ಚಿಕ್ಕಮಗಳೂರು: ಗನ್ ತೆಗೆದಿಡುವಾಗ ಮಿಸ್ ಫೈರ್ ಆಗಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ತಾಲೂಕಿನ ಕಳವಾಸೆ ಗ್ರಾಮದಲ್ಲಿ ನಡೆದಿದೆ.
ಕಳವಾಸೆ ಗ್ರಾಮದ ಅರುಣ್ (47) ಮೃತಪಟ್ಟವರಾಗಿದ್ದಾರೆ. ಶೆಡ್ ನಲ್ಲಿದ್ದ ಗನ್ ಒಳಗಿಡಲು ಒರೆಸುವಾಗ ಗನ್ ಮಿಸ್ ಫೈರ್ ಆಗಿತ್ತು. ಇದರಿಂದಾಗಿ ಅರುಣ್ ಅವರ ಬಲಗಣ್ಣಿಗೆ ತಾಗಿದ ಗುಂಡು, ತಲೆಯಿಂದ ಹೊರ ಚಿಮ್ಮಿದೆ.
ಇದು ಆತ್ಮಹತ್ಯೆಯೋ ಅಥವಾ ಮಿಸ್ ಫೈರ್ ಅನ್ನೋದು ಸ್ಪಷ್ಟವಾಗಿಲ್ಲ, ಸದ್ಯ ಪರೀಕ್ಷೆಗಾಗಿ ಮೃತದೇಹ ಹಾಸನದ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮನೆಯಲ್ಲಿ ಯಾರೂ ಇಲ್ಲದಿರುವಾಗ ಶೆಡ್ ನಲ್ಲಿ ಈ ಘಟನೆ ನಡೆದಿದೆ.
ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth