ವೆಂಟಿಲೆಟರ್ ಬೆಡ್ ಸಿಗಲಿಲ್ಲ: ಸರಿಗಮಪ ಖ್ಯಾತಿಯ, ಹೆಡ್ ಕಾನ್ ಸ್ಟೇಬಲ್ ಸುಬ್ರಹ್ಮಣ್ಯ ಪತ್ನಿ ಕೊವಿಡ್ ಗೆ ಬಲಿ - Mahanayaka
4:01 AM Wednesday 17 - September 2025

ವೆಂಟಿಲೆಟರ್ ಬೆಡ್ ಸಿಗಲಿಲ್ಲ: ಸರಿಗಮಪ ಖ್ಯಾತಿಯ, ಹೆಡ್ ಕಾನ್ ಸ್ಟೇಬಲ್ ಸುಬ್ರಹ್ಮಣ್ಯ ಪತ್ನಿ ಕೊವಿಡ್ ಗೆ ಬಲಿ

subramani
11/05/2021

ಬೆಂಗಳೂರು: ಕನ್ನಡ ಸರಿಗಮಪ ಖ್ಯಾತಿಯ ಹೆಡ್ ಕಾನ್ ಸ್ಟೇಬಲ್ ಸುಬ್ರಹ್ಮಣ್ಯ ಅವರ ಪತ್ನಿ ಕೊವಿಡ್ ಸೋಂಕಿನಿಂದ ಸಾವನಪ್ಪಿದ್ದಾರೆ.  ವಾರದ ಹಿಂದ ಕಾಣಿಸಿಕೊಂಡಿದ ಸೋಂಕಿನಿಂದಾಗಿ ಅವರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ.


Provided by

ಸುಬ್ರಹ್ಮಣ್ಯ ಅವರ ಪತ್ನಿ ಜ್ಯೋತಿ ಮೃತಪಟ್ಟವರಾಗಿದ್ದು,  ವೈದ್ಯಕೀಯ ವ್ಯವಸ್ಥೆ ಸಕಾಲಕ್ಕೆ ಸಿಗದ ಕಾರಣ ಅವರು ಮೃತಪಟ್ಟಿದ್ದು, ರಾಜ್ಯ ಸರ್ಕಾರದ ಕಳಪೆ ಪ್ರದರ್ಶನದಿಂದಾಗಿ ನೂರಾರು ಜನರು ತಮ್ಮ ಬಂಧುಬಳಗವನ್ನು ಕಳೆದುಕೊಳ್ಳುತ್ತಿದ್ದಾರೆ.

ಜ್ಯೋತಿ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡ ಬಳಿಕ ಚಿಕಿತ್ಸೆಗಾಗಿ ಹಲವು ಆಸ್ಪತ್ರೆಗಳಿಗೆ ಸುಬ್ರಹ್ಮಣ್ಯ ಅವರು ಪತ್ನಿಯನ್ನು ಕರೆದುಕೊಂಡು ಹೋಗಿದ್ದಾರೆ. ಆದರೆ ವೆಂಟಿಲೆಟರ್ ಬೆಡ್ ಸಿಗದೇ ಅವರು ಪರದಾಡಿದ್ದಾರೆ.

ಬಳಿಕ ಹೊಸಕೋಟೆಯ ಸಿಲಿಕಾನ್ ಸಿಟಿ ಆಸ್ಪತ್ರೆಗೆ ಜ್ಯೋತಿಯವರನ್ನು ದಾಖಲಿಸಲಾಗಿತ್ತು.  ಆದರೆ ಆಗಲೇ ಬಹಳ ತಡವಾಗಿದ್ದರಿಂದಾಗಿ  ಮೇ 10ರಂದು ಜ್ಯೋತಿ ಸಾವನ್ನಪ್ಪಿದ್ದಾರೆ. ಸಕಾಲಕ್ಕೆ ವೆಂಟಿಲೆಟರ್ ಬೆಡ್ ಸಿಕ್ಕಿದ್ದರೆ, ಅವರು ಬದುಕುವ ಸಾಧ್ಯತೆಗಳಿತ್ತು ಎಂದು ಹೇಳಲಾಗಿದೆ.

ಇತ್ತೀಚಿನ ಸುದ್ದಿ