ಹಲಾಲ್ ಮಾಂಸ ವಿವಾದ: ಪ್ರಚೋದನಾಕಾರಿ ಪೋಸ್ಟ್ ಹಾಕುವವರ ವಿರುದ್ಧ ಕ್ರಮ | ಅರಗ ಜ್ಞಾನೇಂದ್ರ - Mahanayaka

ಹಲಾಲ್ ಮಾಂಸ ವಿವಾದ: ಪ್ರಚೋದನಾಕಾರಿ ಪೋಸ್ಟ್ ಹಾಕುವವರ ವಿರುದ್ಧ ಕ್ರಮ | ಅರಗ ಜ್ಞಾನೇಂದ್ರ

araga janendra
30/03/2022


Provided by

ಬೆಂಗಳೂರು: ಹಲಾಲ್ ಮಾಂಸ ನಿಷೇಧ ಮಾಡುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾಕಾರಿ ಪೋಸ್ಟ್, ವಿಡಿಯೋ ಹಾಕುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.

ಸುದ್ದಿಗಾರರ ಜೊತೆಗೆ ಈ ಬಗ್ಗೆ ಮಾತನಾಡಿದ ಅವರು,ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾಕಾರಿ ಪೋಸ್ಟ್ ಮಾಡುತ್ತಿರುವವರ ಬಗ್ಗೆ ಪೊಲೀಸರು ನಿಗಾ ಇಟ್ಟಿದ್ದಾರೆ. ಪ್ರಚೋದನೆ ನೀಡುವವರ ವಿರುದ್ಧ ಪೊಲೀಸರು ಕ್ರಮಕೈಗೊಳ್ಳುತ್ತಾರೆ ಎಂದು ತಿಳಿಸಿದರು.

ಒಂದು ಸಮುದಾಯಕ್ಕೆ ಈ ಹೇಳಿಕೆಗಳಿಂದ ಏನೋ ಆಗುತ್ತೆ ಅಂತ ಭಾವಿಸುವ ಅಗತ್ಯವಿಲ್ಲ. ಒಂದು ಸಮುದಾಯ ಹಲಾಲ್ ಮಾಡದೇ ಮಾಂಸ ಮಾರಾಟ ಮಾಡಲ್ಲ‌ ಅನ್ನುತ್ತೆ. ಇನ್ನೊಂದು ಸಮುದಾಯ ಹಲಾಲ್ ಮಾಂಸ ನಮ್ಮ ದೇವರಿಗೆ ಆಗಲ್ಲ ಅನ್ನುತ್ತೆ. ಈಗಿನ ವಿವಾದದ ಕೇಂದ್ರವೇ ಇದು. ಮೊದಲು ಹಿಜಾಬ್ ನಿಂದ ಆಕ್ಷನ್ ಶುರು ಆಯಿತು. ಇನ್ನೊಬ್ರು ಅದಕ್ಕೆ ರಿಯಾಕ್ಷನ್ ಮಾಡ್ತಿದ್ದಾರೆ. ಇದು ಆದಷ್ಟೂ ತಣ್ಣಗೆ ಆಗಬೇಕು. ಶಾಂತಿ ಸುವ್ಯವಸ್ಥೆ ಕದಡದಂತೆ ಎಲ್ರೂ ಎಚ್ಚರ ವಹಿಸಬೇಕು ಎಂದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ದೇವರ ವಿಗ್ರಹ ಕೆತ್ತುವ ಮುಸ್ಲಿಮರಿಗೂ ಬಹಿಷ್ಕಾರ ಹಾಕುತ್ತೀರಾ? | ಕುಮಾರಸ್ವಾಮಿ ಪ್ರಶ್ನೆ

ಬಿಜೆಪಿಯ ವಿಜಯೋತ್ಸವದಲ್ಲಿ ಭಾಗಿಯಾದ ಮುಸ್ಲಿಂ ಯುವಕನ ಹತ್ಯೆ; ನಾಲ್ವರ ಬಂಧನ

ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಬೆಂಕಿ: ತನಿಖೆಗೆ ಆದೇಶಿಸಿದ ಕೇಂದ್ರ ಸರ್ಕಾರ

ಗೋಕಾಕ್ ಜನತೆಗೆ ಸಿಹಿ ಸುದ್ದಿ ನೀಡಿದ ರಮೇಶ್ ಜಾರಕಿಹೊಳಿ: ಉಚಿತ ಚಿತ್ರ ಪ್ರದರ್ಶನಕ್ಕೆ ಅವಕಾಶ

ಹುಮ್ನಾಬಾದ್ ಪೊಲೀಸರ ಕಾರ್ಯಾಚರಣೆ: ಐಪಿಎಲ್ ಬುಕ್ಕಿಯ ಬಂಧನ

 

ಇತ್ತೀಚಿನ ಸುದ್ದಿ