ಮಾಜಿ ಕೌನ್ಸಿಲರ್ ನ ಪ್ರಾಣ ತೆಗೆದ ಹಲಸಿನ ಹಣ್ಣು | ಕೆಲವೇ ಕ್ಷಣದಲ್ಲಿ ನಡೆದಿತ್ತು ಘಟನೆ - Mahanayaka
2:21 AM Wednesday 15 - October 2025

ಮಾಜಿ ಕೌನ್ಸಿಲರ್ ನ ಪ್ರಾಣ ತೆಗೆದ ಹಲಸಿನ ಹಣ್ಣು | ಕೆಲವೇ ಕ್ಷಣದಲ್ಲಿ ನಡೆದಿತ್ತು ಘಟನೆ

narayan murthy
09/07/2021

ಪಶ್ಚಿಮಗೋದಾವರಿ: ಹಲಸಿನ ಹಣ್ಣು ಕೊಯ್ಯುತ್ತಿದ್ದ ವ್ಯಕ್ತಿಯೊಬ್ಬರು ಮುಖಕ್ಕೆ ಹಲಸಿನ ಹಣ್ಣು ಬಿದ್ದಿದ್ದು, ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡಿದ್ದ ಅವರು ಮೃತಪಟ್ಟಿರುವ ಘಟನೆ ಇಲ್ಲಿನ ಪಾಲಕೊಲ್ಲು ಗ್ರಾಮದಲ್ಲಿ ನಡೆದಿದೆ.


Provided by

ಇಲ್ಲಿನ ವೆಂಕಟೇಶ್ವರ ನಗರದ ಮಾಜಿ ಕೌನ್ಸಿಲರ್  66  ವರ್ಷ ವಯಸ್ಸಿನ ನಾರಾಯಣ ಸ್ವಾಮಿ ಮೃತಪಟ್ಟವರಾಗಿದ್ದು, ತಮ್ಮ ಮನೆಯ ಹಲಸಿನ ಮರದಿಂದ ಹಲಸಿನ ಕಣ್ಣು ಕೊಯ್ಯುತ್ತಿದ್ದ ಸಂದರ್ಭದಲ್ಲಿ  ಹಣ್ಣೊಂದು ಅವರ ಮುಖಕ್ಕೆ ಬಿದ್ದಿದೆ.

ಹಣ್ಣು ಮುಖಕ್ಕೆ ಬಿದ್ದ ರಭಸಕ್ಕೆ ಅವರು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಅವರು ನಿಂತಿದ್ದ ಸ್ಥಳದಲ್ಲಿ ಕಾಂಕ್ರೀಟ್ ರಸ್ತೆ ಇದ್ದ ಕಾರಣ ಅವರು ನೆಲಕ್ಕೆ ಬಿದ್ದಾಗ ಏಟು ತೀವ್ರ ಸ್ವರೂಪದಲ್ಲಿ ಬಿದ್ದಿದೆ ಎನ್ನಲಾಗಿದೆ.

ತಕ್ಷಣವೇ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಭೀಮವರಂ ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ರಸ್ತೆ ಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ