ಗಾಝಾದಲ್ಲಿ ಇಸ್ರೇಲಿ ಸೈನಿಕರ ಸೆರೆ: ಹಮಾಸ್ ಬಹಿರಂಗ ಘೋಷಣೆ

ಗಾಝಾದಲ್ಲಿ ಇಸ್ರೇಲಿ ಸೈನಿಕರನ್ನು ಸೆರೆ ಹಿಡಿದಿರುವುದಾಗಿ ಹಮಾಸ್ ಹೇಳಿಕೊಂಡಿದೆ. ಹಮಾಸ್ ವಕ್ತಾರ ಅಬು ಉಬೈದ ಈ ಸುದ್ದಿಯನ್ನು ಬಹಿರಂಗಪಡಿಸಿದ್ದಾರೆ. ಜಬಾಲಿಯ ಎಂಬಲ್ಲಿಯ ಸುರಂಗದಿಂದ ಇಸ್ರೇಲಿ ಸೈನಿಕರನ್ನು ಸೆರೆಹಿಡಿದುಕೊಂಡು ಹೋಗುವ ದೃಶ್ಯವನ್ನು ಕೂಡ ಹಮಾಸ್ ಬಿಡುಗಡೆಗೊಳಿಸಿದೆ. ಆದರೆ ಇಸ್ರೇಲ್ ಈ ಸುದ್ದಿಯನ್ನು ನಿರಾಕರಿಸಿದೆ.
ಜಬಾಲಿಯ ನಿರಾಶ್ರಿತ ಶಿಬಿರದ ಸುರಂಗಕ್ಕೆ ಇಸ್ರೇಲಿ ಸೈನಿಕರನ್ನು ಎಳೆದುಕೊಂಡು ಹೋಗುವ ವಿಡಿಯೋವನ್ನು ಹಮಾಸ್ ಬಿಡುಗಡೆ ಮಾಡಿದೆ.
ಇಸ್ರೇಲ್ ವಿರುದ್ಧ ನೇರಾ ನೇರ ಹೋರಾಟದಲ್ಲಿ ಹಮಾಸ್ ಭಾಗಿಯಾಗಿದ್ದು ಈ ಸಂದರ್ಭದಲ್ಲಿ ಹಲವರನ್ನು ನಾವು ಬಂಧಿಸಿದ್ದೇವೆ ಎಂದು ಅದು ಹೇಳಿದೆ. ಓರ್ವ ಸೈನಿಕನನ್ನು ಸುರಂಗದ ಕಡೆಗೆ ಎಳೆದುಕೊಂಡು ಹೋಗುವುದು ಮತ್ತು ಇನ್ನೊರ್ವ ಗಾಯಗೊಂಡು ಬಿದ್ದಿರುವ ದೃಶ್ಯ ವಿಡಿಯೋದಲ್ಲಿದೆ. ಇದೇ ವೇಳೆ ಕದನ ವಿರಾಮ ಒಪ್ಪಂದಕ್ಕಾಗಿ ಕತಾರ್ ನಲ್ಲಿ ಪ್ರಯತ್ನಗಳು ನಡೆಯುತ್ತಿವೆ ಗಾಝಾದಿಂದ ಇಸ್ರೇಲಿ ಸೇನೆಯನ್ನು ಹಿಂಪಡೆಯದ ಹೊರತು ಕದನ ವಿರಾಮ ಒಪ್ಪಂದಕ್ಕೆ ಮಹತ್ವ ಇಲ್ಲ ಎಂದು ಹಮಾಸ್ ಹೇಳಿದೆ. ಹಾಗೆಯೇ ನೇತನ್ಯಾಹು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿ ಇಸ್ರೇಲ್ ನಲ್ಲಿ ಭಾರಿ ಪ್ರತಿಭಟನೆಗಳು ನಡೆಯುತ್ತಿವೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth