‘ವಂದೇ ಇಂಡಿಯನ್ ಕಾನ್‌ಸ್ಟಿಟ್ಯೂಷನ್‌’: ಹಂಸಲೇಖ ಸಂಯೋಜನೆಯ ಸಂವಿಧಾನ ಗೀತೆ ವೈರಲ್ - Mahanayaka

‘ವಂದೇ ಇಂಡಿಯನ್ ಕಾನ್‌ಸ್ಟಿಟ್ಯೂಷನ್‌’: ಹಂಸಲೇಖ ಸಂಯೋಜನೆಯ ಸಂವಿಧಾನ ಗೀತೆ ವೈರಲ್

hamsalekha samvidhana geete
01/12/2021


Provided by

ಬೆಂಗಳೂರು: ಸಂಗೀತ ನಿರ್ದೇಶಕ ಹಂಸಲೇಖ ಅವರು ಸಂವಿಧಾನ ಗೀತೆ ಸಂಯೋಜನೆ ನಡೆಸಿದ್ದು, ಈ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ.  ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನಾವು ನೀವು ಎಲ್ಲರಿಗೂ ಇದೆ ಕಾನೂನು, ಎಲ್ಲರೂ ಬಾಂಧವ್ಯವನ್ನೇ ಕಾಣೋಣ, ಜೀವನ ವಿಧಾನ, ಸಮತೆ ಈ ಮೊದಲಾದ ಅಂಶಗಳನ್ನು ಸಂವಿಧಾನ ಗೀತೆಯಲ್ಲಿ ಹೇಳಲಾಗಿದೆ. ಜೊತೆಗೆ, ‘ವಂದೇ ಇಂಡಿಯನ್ ಕಾನ್‌ಸ್ಟಿಟ್ಯೂಷನ್‌’ ಎಂಬ ಪದ ಗೀತೆಯೆಡೆಗೆ ಜನರನ್ನು ಸೆಳೆದಿದೆ.

“ನಾನು, ನೀನು, ನಮಗಾಗಿರೋದೇ ಕಾನೂನು,

ನಾವೂನು, ನೀವೂನು ಕಾನೂನಡಿಯಲಿ ಬಾಳೋಣು”

ಬಾಳೋಣು, ಬೆಳೆಯೋಣು, ಬಾಂಧವ್ಯವನೇ ಕಾಣೋಣು

ಜೀವನ ವಿಧಾನಯಾನ, ಸಮತಾ ಪ್ರಧಾನ ಗಾನ

ಬಹುತ್‌ ಭಾರತದ ಬೃಹತ್ ಸಂವಿಧಾನ

ಓ ಬಡವರ ಗೀತೆ, ಓ ಬಹುಜನ ಮಾತೆ

ಓ ಬಡವರ ಗೀತೆ, ಓ ಬಹುಜನ ಮಾತೆ

ಅಕ್ಷರ ರೂಪದ ಶಾಂತಿಯ ದನಿಯ

ಪ್ರಜಾಪ್ರಭುತ್ವದ ಇನ್‌ಸ್ಟಿಟ್ಯೂಷನ್‌

“ವಂದೇ ವಂದೇ ಇಂಡಿಯನ್ ಕಾನ್‌ಸ್ಟಿಟ್ಯೂಷನ್‌”

“ವಂದೇ ಇಂಡಿಯನ್ ಕಾನ್‌ಸ್ಟಿಟ್ಯೂಷನ್‌”

“ವಂದೇ ಇಂಡಿಯನ್‌ ಕಾನ್‌ಸ್ಟಿಟ್ಯೂಷನ್‌”

-ಹಂಸಲೇಖ

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ