ಕಂಬಳಕ್ಕೆ ಆಗಮಿಸಿದ್ದ ಬಿಗ್ ಬಾಸ್ ಖ್ಯಾತಿಯ ಸಾನ್ಯ ಅಯ್ಯರ್ ಗೆ ಕಿರುಕುಳ: ವಿಡಿಯೋ ವೈರಲ್ - Mahanayaka

ಕಂಬಳಕ್ಕೆ ಆಗಮಿಸಿದ್ದ ಬಿಗ್ ಬಾಸ್ ಖ್ಯಾತಿಯ ಸಾನ್ಯ ಅಯ್ಯರ್ ಗೆ ಕಿರುಕುಳ: ವಿಡಿಯೋ ವೈರಲ್

kamballa
31/01/2023

ಬಿಗ್ ಬಾಸ್ ಸೀಸನ್ 9 ರ ಸ್ಫರ್ಧಿ ಹಾಗೂ ಪುಟ್ಟಗೌರಿ ಧಾರಾವಾಹಿ ಖ್ಯಾತಿಯ ನಟಿ ಮತ್ತು ಮಾಡೆಲ್ ಸಾನ್ಯ ಅಯ್ಯರ್ ಅವರು ಯುವಕನಿಗೆ ಬೈಯ್ಯುವ ವೀಡಿಯೋವೊಂದು ವೈರಲ್ ಆಗಿದೆ.


Provided by

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಕೋಟಿ-ಚನ್ನಯ್ಯ ಜೋಡುಕೆರೆ ಕಂಬಳಕ್ಕೆ ಸಾನ್ಯ ಅತಿಥಿಯಾಗಿ ಬಂದಿದ್ದರು. ಅದೇ ದಿನ ಮಧ್ಯರಾತ್ರಿ ಸ್ನೇಹಿತರೊಡನೆ ಮತ್ತೆ ಕಂಬಳ ವೀಕ್ಷಣೆಗೆ ಸಾನ್ಯ ಆಗಮಿಸಿದ್ದರು.

ಕಂಬಳ ವೀಕ್ಷಣೆ ಮಾಡುವ ವೇಳೆ ಯುವಕನೊಬ್ಬ ಸೆಲ್ಫಿ ತೆಗೆಯುವಾಗ ಸಾನ್ಯ ಮತ್ತು ಸ್ನೇಹಿತೆಯರ ಕೈ ಹಿಡಿದು ಎಳೆದಿರುವ ಆರೋಪ ಮಾಡಲಾಗಿದೆ. ಕೈ ಹಿಡಿದು ಎಳೆದಿದ್ದರಿಂದ ಆಕ್ರೋಶಗೊಂಡ ಸಾನ್ಯ ಅಲ್ಲಿಯೇ ಯುವಕನಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಯುವಕನು ಕೂಡ ಸಾನ್ಯ ಕೆನ್ನೆಗೆ ಬಾರಿಸಿದ್ದಾನೆ. ಇದರ ಬೆನ್ನಲ್ಲೇ ಸ್ಥಳೀಯ ಆಟೋ ಚಾಲಕರು ಯುವಕನಿಗೆ ಧರ್ಮದೇಟು ನೀಡಿದ್ದಾರೆ ಎನ್ನಲಾಗಿದೆ.

ಈ ಘಟನೆಯಿಂದ ಬೇಸರಗೊಂಡ ಸಾನ್ಯ ಮತ್ತು ಆಕೆಯ ಸ್ನೇಹಿತರು ಕಂಬಳ ಆಯೋಜಕರನ್ನು ತರಾಟೆ ತೆಗೆದುಕೊಂಡರು. ಒಬ್ಬ ಹೆಣ್ಣುಮಗಳ ಜೊತೆ ಈ ರೀತಿ ನಡೆದುಕೊಳ್ಳುತ್ತಾರಾ? ಆತ ಆಕೆಯ ಜುಟ್ಟು ಹಿಡಿದು ಎಳೆದಾಡಿದ್ದಾನೆ ಎಂದು ವೇದಿಕೆಯ ಮೇಲೆಯೇ ಸಾನ್ಯ, ಸ್ನೇಹಿತೆ ಆಯೋಜಕರನ್ನು ತರಾಟೆಗೆ ತೆಗೆದುಕೊಂಡರು.

ಸಾನ್ಯ ಕೂಡ ಏರು ಧ್ವನಿಯಲ್ಲಿ ಘಟನೆಯನ್ನು ಖಂಡಿಸಿದರು. ಕೆಲ ಕಾಲ ವೇದಿಕೆಯಲ್ಲಿ ಭಾರಿ ಗದ್ದಲು ನಡೆಯಿತು. ಬಳಿಕ ಸ್ಥಳೀಯರು ಮಧ್ಯಪ್ರವೇಶಿಸಿ, ಸಾನ್ಯ ಮತ್ತು ಆಕೆಯ ಸ್ನೇಹಿತರನ್ನು ಸಮಾಧಾನಪಡಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ