ಸಂವಿಧಾನವನ್ನು ಬದಲಿಸಲು ಹರಿ, ಹರ, ಬ್ರಹ್ಮ ಬಂದರೂ ಸಾಧ್ಯವಿಲ್ಲ: ಎನ್.ಮಹೇಶ್ - Mahanayaka
11:59 AM Tuesday 16 - September 2025

ಸಂವಿಧಾನವನ್ನು ಬದಲಿಸಲು ಹರಿ, ಹರ, ಬ್ರಹ್ಮ ಬಂದರೂ ಸಾಧ್ಯವಿಲ್ಲ: ಎನ್.ಮಹೇಶ್

n mahesh
25/01/2023

ಯಳಂದೂರು: ದೇಶದ ಸಂವಿಧಾನವನ್ನು ಬದಲಿಸಲು ಹರಿ, ಹರ, ಬ್ರಹ್ಮ ಬಂದರೂ ಸಾಧ್ಯವಿಲ್ಲ ಎಂದು ಮಾಜಿ ಸಚಿವ, ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಹೇಳಿದರು.


Provided by

ಕೊಳ್ಳೇಗಾಲ ಕ್ಷೇತ್ರದ ಯಳಂದೂರು ಪಟ್ಟಣದಲ್ಲಿ ಎನ್.ಮಹೇಶ್ ಅವರು ನಿರ್ಮಿಸಿರುವ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬೃಹತ್ ಪ್ರತಿಮೆಯನ್ನು ಬುಧವಾರ ಅನಾವರಣಗೊಳಿಸಿದ ಬಳಿಕ ಎನ್.ಮಹೇಶ್ ಮಾತನಾಡುತ್ತಿದ್ದರು.

ನಮ್ಮ ದೇಶದಲ್ಲಿ 6 ಸಾವಿರಕ್ಕೂ ಅಧಿಕ ಜಾತಿಗಳಿವೆ, ಅಸ್ಪೃಶ್ಯತೆ ಸೃಷ್ಟಿಯಾಗಿ ಸಾವಿರ ವರ್ಷ ಕಳೆದಿದೆ. ಇದರ ಪರಿಣಾಮವಾಗಿ ಕೇರಿ, ಊರು, ನಗರ, ಬಡಾವಣೆ ಸ್ಲಂ ಗಳ ಸೃಷ್ಟಿಯಾಗಿವೆ. ಬಡವರು, ಶ್ರೀಮಂತರು  ಅನ್ನೋ ವೈರುಧ್ಯಗಳಿವೆ. ಇಷ್ಟೆಲ್ಲ ಇದ್ದರೂ ನಮ್ಮ ದೇಶ ಐಕ್ಯತೆಯಲ್ಲಿದೆ. ಅದಕ್ಕೆ ಕಾರಣ ನಮ್ಮ ಸಂವಿಧಾನ, ಬಾಬಾ ಸಾಹೇಬರ ಸಂವಿಧಾನ ಕಾರಣ, ಸಂವಿಧಾನ ಬದಲಾವಣೆ ಮಾಡಲು ಹರಿ, ಹರ, ಬ್ರಹ್ಮ ಬಂದರೂ ಸಾಧ್ಯವಿಲ್ಲ ಎಂದು ಎನ್.ಮಹೇಶ್ ಹೇಳಿದರು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರು, “ನಾನು ಭಾರತೀಯ ಮೊದಲಿಗೂ ಕೊನೆಗೂ” ಎಂಬ ಮಾತನ್ನು ಹೇಳುತ್ತಾರೆ, ಈ ಮಾತನ್ನು ಬೇರೆ ಯಾವುದೇ ಮಹಾಪುರುಷರು ಹೇಳಿಲ್ಲ, ಸ್ವಾತಂತ್ರ್ಯ ಚಳುವಳಿ ನಡೆಸಿದವರು ಕೂಡ ಈ ಮಾತನ್ನು ಹೇಳಿಲ್ಲ ಎಂದು ಎನ್.ಮಹೇಶ್ ಹೇಳಿದರು.

ಇನ್ನೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಅನಾವರಣಕ್ಕೆ ಸಾವಿರಾರು ಜನರು ನೆರೆದಿದ್ದು, ಪ್ರತಿಮೆ ಅನಾವರಣೆ ವೇಳೆ ಹರ್ಷೋದ್ಗಾರ ಮಾಡಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ