ಹೋಮ್ ವರ್ಕ್ ಮಾಡದ ವಿದ್ಯಾರ್ಥಿಯನ್ನು ತಲೆಕೆಳಗಾಗಿ ನೇತುಹಾಕಿ ಹಲ್ಲೆ: ಪ್ರಾಂಶುಪಾಲೆ, ಡ್ರೈವರ್ ನ ಬಂಧನ - Mahanayaka
7:23 PM Monday 29 - September 2025

ಹೋಮ್ ವರ್ಕ್ ಮಾಡದ ವಿದ್ಯಾರ್ಥಿಯನ್ನು ತಲೆಕೆಳಗಾಗಿ ನೇತುಹಾಕಿ ಹಲ್ಲೆ: ಪ್ರಾಂಶುಪಾಲೆ, ಡ್ರೈವರ್ ನ ಬಂಧನ

haryana police
29/09/2025

ಚಂಡೀಗಢ: 2ನೇ ತರಗತಿಯ ವಿದ್ಯಾರ್ಥಿಯನ್ನು ಕಿಟಕಿಗೆ ತಲೆಕೆಳಗಾಗಿ ನೇತುಹಾಕಿ ಥಳಿಸಿದ ಘಟನೆ ಪಾಣಿಪತ್ ಪಟ್ಟಣದ ಖಾಸಗಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಇಲ್ಲಿನ ಶ್ರೀಜನ್ ಪಬ್ಲಿಕ್ ಶಾಲೆಯಲ್ಲಿ ಈ ಘಟನೆ ನಡೆದಿದ್ದು,  7 ವರ್ಷದ ಬಾಲಕ ಶಾಲಾ ಬಸ್ ಚಾಲಕ ಹಾಗೂ ಪ್ರಾಂಶುಪಾಲರ ಕೈಯಿಂದ ಹಲ್ಲೆಗೊಳಗಾಗಿದ್ದಾನೆ.


Provided by

ಬಾಲಕನನ್ನು  ಕಿಟಕಿಗೆ ತಲೆಕೆಳಗಾಗಿ ನೇತು ಹಾಕಿ ಡ್ರೈವರ್ ಥಳಿಸುತ್ತಿರುವುದು  ಹಾಗೂ ಮತ್ತೊಂದು ವಿಡಿಯೋದಲ್ಲಿ ಶಾಲಾ ಪ್ರಾಂಶುಪಾಲ ಶಾಲಾ ಸಹಪಾಠಿಗಳ ಎದುರು ವಿದ್ಯಾರ್ಥಿಗಳಿಗೆ ಕಪಾಳಮೋಕ್ಷ ಮಾಡುತ್ತಿರುವುದು ಮತ್ತು ಕಿವಿ ಹಿಡಿದೆಳೆಯುತ್ತಿರುವ ದೃಶ್ಯ ಕಂಡು ಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಪ್ರಾಂಶುಪಾಲ ಹಾಗೂ ಚಾಲಕನನ್ನು ಬಂಧಿಸಲಾಗಿದೆ. ಬಾಲಕನನ್ನು ಕಿಟಕಿಯಲ್ಲಿ ತಲೆಕೆಳಗಾಗಿ ನೇತುಹಾಕಿ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಬಾಲಕನ ಕುಟುಂಬಕ್ಕೆ ವಿಚಾರ ತಿಳಿದು ಬಂತು. ಬಳಿಕ ಅವರು ಪೊಲೀಸರನ್ನು ಸಂಪರ್ಕಿಸಿದ್ದಾರೆ.

ಆಗಸ್ಟ್ 13ರಂದು ಈ ಘಟನೆ ನಡೆದಿದೆ.  ಶಾಲಾ ಪ್ರಾಂಶುಪಾಲರಾದ ರೀನಾ ಮತ್ತು ಬಸ್ ಚಾಲಕ ಅಜಯ್ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಕಾಯ್ದೆಯ ಸೆಕ್ಷನ್ 115 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 127(2) (ಅಕ್ರಮ ಬಂಧನ), 351(2) (ಕ್ರಿಮಿನಲ್ ಬೆದರಿಕೆ) ಮತ್ತು ಬಾಲ ನ್ಯಾಯ ಕಾಯ್ದೆಯ ಸೆಕ್ಷನ್ 75 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಹೋಮ್ ವರ್ಕ್ ಮಾಡದಿರುವ ವಿಚಾರಕ್ಕೆ ವಿದ್ಯಾರ್ಥಿಯನ್ನು ಗದರಿಸಲು ಬಸ್ ಚಾಲಕನಿಗೆ ಕರೆ ಮಾಡಿ ಹೇಳಿದ್ದೆ ಎಂದು ಪ್ರಾಂಶುಪಾಲರು ಒಪ್ಪಿಕೊಂಡಿದ್ದಾರೆ. ಅಲ್ಲದೇ ಶಾಲಾ ಸಮವಸ್ತ್ರದಲ್ಲಿ ಕಾಲುಗಳನ್ನು ಹಗ್ಗದಿಂದ ಕಟ್ಟಿಹಾಕಿ ಕಿಟಕಿಗೆ ನೇತುಹಾಕಿರುವ ವಿಚಾರ ತಿಳಿದ ನಂತರ ಆತನನ್ನು ಸೇವೆಯಿಂದ ವಜಾಗೊಳಿಸಿದ್ದೆ ಎಂದು ಪ್ರಾಂಶುಪಾಲರು ಒಪ್ಪಿಕೊಂಡಿದ್ದಾರೆ.  ಈ ಘಟನೆಯ ಬೆನ್ನಲ್ಲೇ ಪ್ರಾಂಶುಪಾಲರ ವಿರುದ್ಧ ಸಾಕಷ್ಟು ಆರೋಪಿಗಳು ಕೇಳಿ ಬಂದಿದ್ದು, ವಿದ್ಯಾರ್ಥಿಗಳನ್ನ ತರಗತಿ ನೆಲ ಮತ್ತು ಶೌಚಾಲಯ ತೊಳೆಯಲು ಹೇಳುತ್ತಿದ್ದರು ಎನ್ನುವ ಆರೋಪ ಕೇಳಿ ಬಂದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ