ಹರ್ಯಾಣದಲ್ಲಿ ರಾಜಕೀಯ ಆಟ ಬಲು ಜೋರು: ಕಾಂಗ್ರೆಸ್ ಗೆ ಸಿಗುತ್ತಾ 'ಬಲ'..? - Mahanayaka
11:52 PM Saturday 23 - August 2025

ಹರ್ಯಾಣದಲ್ಲಿ ರಾಜಕೀಯ ಆಟ ಬಲು ಜೋರು: ಕಾಂಗ್ರೆಸ್ ಗೆ ಸಿಗುತ್ತಾ ‘ಬಲ’..?

08/05/2024


Provided by

ಹರಿಯಾಣದಲ್ಲಿ ಬಿಜೆಪಿಗೆ ಮತ್ತೊಂದು ಆಘಾತ ಎದುರಾಗಿದೆ. ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿದ್ದ ಮೂವರು ಪಕ್ಷೇತರ ಶಾಸಕರು ಬೆಂಬಲ ಹಿಂಪಡೆದು ಸರ್ಕಾರವನ್ನು ಅಲ್ಪಮತಕ್ಕೆ ತಂದು ನಿಲ್ಲಿಸಿದ್ದಾರೆ.

ಒಂದು ವೇಳೆ ಸರ್ಕಾರದ ವಿರುದ್ಧ ಕಾಂಗ್ರೆಸ್ ಅವಿಶ್ವಾಸ ಮತವನ್ನು ಕೋರಿದರೆ ಕಾಂಗ್ರೆಸ್ ಅನ್ನು ಬೆಂಬಲಿಸುವುದಾಗಿ ದುಶ್ಯಂತ ಚೌಟಾಲ ಅವರ ಜೆ ಜೆ ಪಿ ಹೇಳಿದೆ. ಚೌಟಾಲ ಈಗಿನ ಬಿಜೆಪಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದರು. ಲೋಕಸಭಾ ಚುನಾವಣೆಯ ಸೀಟು ಹಂಚಿಕೆಯ ಚರ್ಚೆ ವಿಫಲಗೊಂಡು ಇವರು ಬಿಜೆಪಿಗೆ ನೀಡಿದ ಬೆಂಬಲವನ್ನು ಹಿಂಪಡೆದು ಸರ್ಕಾರದಿಂದ ಹೊರ ಬಂದಿದ್ದರು.

ಪ್ರತಿಪಕ್ಷ ನಾಯಕ ಕಾಂಗ್ರೆಸ್ಸಿನ ಭೂಪಿಂದರ್ ಹೂಡ ಅವರು ಅವಿಶ್ವಾಸ ಮತಯಾಚನೆ ಮಾಡಿದರೆ ಅವರನ್ನು ತಾನು ಬೆಂಬಲಿಸುವುದಾಗಿ ಚೌಟಾಲ ಹೇಳಿದ್ದಾರೆ.
90 ಸದಸ್ಯರ ಹರಿಯಾಣ ವಿಧಾನಸಭೆಯಲ್ಲಿ ಜೆಜೆಪಿ ಗೆ 10 ಶಾಸಕರಿದ್ದಾರೆ. ಮೂವರು ಪಕ್ಷೇತರರು ಬೆಂಬಲ ಹಿಂಪಡೆಯುವುದರೊಂದಿಗೆ ಬಿಜೆಪಿ ಸರಕಾರ ಅಲ್ಪಮತಕ್ಕೆ ತಿರುಗಿದೆ. ಎರಡು ಶಾಸಕ ಸ್ಥಾನಗಳು ತೆರವಾಗಿರುವುದರಿಂದಾಗಿ ಈಗ 88 ಶಾಸಕರು ಹರಿಯಾಣ ವಿಧಾನಸಭೆಯಲ್ಲಿ ಇದ್ದಾರೆ. ಎನ್ ಡಿಎ ಮೈತ್ರಿಕೂಟಕ್ಕೆ 45 ಶಾಸಕರ ಬೆಂಬಲವಿತ್ತು. ಆದರೆ ಇದೀಗ ಮೂವರು ಶಾಸಕರು ಬೆಂಬಲ ಹಿಂಪಡೆಯುವುದರೊಂದಿಗೆ ಮೈತ್ರಿಕೂಟದ ಬಲ 42ಕ್ಕೆ ಕುಸಿದಿದೆ. ಇದೇ ವೇಳೆ ಪಕ್ಷೇತರದ ಬೆಂಬಲದೊಂದಿಗೆ ಕಾಂಗ್ರೆಸ್ಸಿನ ಬಲ 34 ಆಗಿದ್ದು ಒಂದು ವೇಳೆ ಜೆ.ಜೆ.ಪಿ ಬೆಂಬಲ ಸೂಚಿಸಿದರೆ ಕಾಂಗ್ರೆಸ್ಸಿನ ಬಲ 44ಕ್ಕೆ ಏರಲಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ