ಹಾವನ್ನು ರಕ್ಷಿಸಲು ಹೋಗಿ ನಾಲೆಗೆ ಬಿದ್ದ ಕಾರು: ಮಹಿಳೆಯ ದಾರುಣ ಸಾವು - Mahanayaka
12:19 PM Wednesday 15 - October 2025

ಹಾವನ್ನು ರಕ್ಷಿಸಲು ಹೋಗಿ ನಾಲೆಗೆ ಬಿದ್ದ ಕಾರು: ಮಹಿಳೆಯ ದಾರುಣ ಸಾವು

car
03/02/2022

ಶಿವಮೊಗ್ಗ: ರಸ್ತೆಗೆ ಅಡ್ಡ ಬಂದ ಹಾವನ್ನು ತಪ್ಪಿಸಲು ಯತ್ನಿಸಿದ ಪರಿಣಾಮ ನಿಯಂತ್ರಣ ಕಳೆದುಕೊಂಡ ಕಾರು ಶಿವಮೊಗ್ಗದ ಗಾಜನೂರು ಬಳಿಯ ತುಂಗಾ ಎಡದಂಡೆ ನಾಲೆಗೆ ಉರುಳಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.


Provided by

28 ವರ್ಷ ವಯಸ್ಸಿನ ಸುಷ್ಮಾ ಮೃತ ಮಹಿಳೆಯಾಗಿದ್ದು, ಇಂದು ಬೆಳಗ್ಗಿನ ಜಾವ 3 ಗಂಟೆಯ ವೇಳೆಗೆ ಸುಷ್ಮಾ ಹಾಗೂ ಚೇತನ್ ಕುಮಾರ್ ದಂಪತಿ ಶಿವಮೊಗ್ಗದಿಂದ ತುಮಕೂರಿಗೆ ಪ್ರಯಾಣಿಸುತ್ತಿದ್ದು, ಈ ವೇಳೆ ರಸ್ತೆಯಲ್ಲಿ ಏಕಾಏಕಿ ಹಾವೊಂದು ದಾಟಿದೆ. ಹಾವನ್ನು ರಕ್ಷಿಸುವ ಭರದಲ್ಲಿ  ತಕ್ಷಣವೇ ಬ್ರೇಕ್ ಹಾಕಿದ ಪರಿಣಾಮ ಕಾರು ನಾಲೆಗೆ ಉರುಳಿದೆ.

ಕಾರು ನಾಳೆಗೆ ಬಿದ್ದ ವೇಳೆ ಪತಿ ಚೇತನ್ ಕುಮಾರ್ ತಮ್ಮನ್ನು ರಕ್ಷಿಸುವಂತೆ ಕೂಗಿಕೊಂಡರೂ ಸ್ಥಳೀಯರು ಯಾರೂ ಕೂಡ ಭಯದಿಂದ ಮನೆಯಿಂದ ಹೊರ ಬಂದಿರಲಿಲ್ಲ ಎನ್ನಲಾಗಿದೆ. ಅವರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಚೇತನ್ ಕುಮಾರ್ ನ್ನು ರಕ್ಷಿಸಿದ್ದಾರೆ.

ಸಮಯಕ್ಕೆ ಸರಿಯಾಗಿ ಸ್ಥಳೀಯರು ನೆರವು ನೀಡಿದ್ದರೆ, ಸುಷ್ಮಾ ಅವರ ಪ್ರಾಣ ಕೂಡ ಉಳಿಸಬಹುದಿದ್ದೇನೋ ಎನ್ನುವ ವಿಷಾದದ ಮಾತುಗಳು ಕೇಳಿ ಬಂದಿವೆ. ಘಟನೆಗೆ ಸಂಬಂಧಿಸಿದಂತೆ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಪುನೀತ್ ರಾಜ್ ಕುಮಾರ್ ಮನೆಗೆ ಭೇಟಿ ನೀಡಲಿರುವ ಅಲ್ಲು ಅರ್ಜುನ್: ಅಂದೇಕೆ ಭೇಟಿ ನೀಡಿರಲಿಲ್ಲ ಗೊತ್ತಾ?

3 ವರ್ಷದ ಮಗುವನ್ನು ಕರಡಿ ಬೋನಿಗೆ ಎಸೆದ ತಾಯಿ: ಸಿಸಿ ಕ್ಯಾಮರದಲ್ಲಿ ಭಯಾನಕ ದೃಶ್ಯ ಸೆರೆ

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್:  ಮಾದರಿ ಪ್ರಶ್ನೆ ಪತ್ರಿಕೆ ಪ್ರಕಟ

ಪ್ರತಿ ಮದುವೆ ಹಿಂಸೆ, ಪ್ರತಿ ಪುರುಷ ಅತ್ಯಾಚಾರಿ ಎನ್ನಲು ಸಾಧ್ಯವಿಲ್ಲ | ಸ್ಮೃತಿ ಇರಾನಿ

ಚಿಕನ್ ಫಾಕ್ಸ್: ಒಂದೇ ಕುಟುಂಬದ ಇಬ್ಬರು ಬಾಲಕರ ಸಾವು

ಇತ್ತೀಚಿನ ಸುದ್ದಿ